ಮುಂಬೈ: ಬಿಜೆಪಿಯ ಹಿರಿಯ ನಾಯಕ ಹಾಗೂ ಶಾಸಕಾಂಗ ಪಕ್ಷದ ನೂತನ ನಾಯಕರಾಗಿ ಆಯ್ಕೆಯಾಗಿರುವ ದೇವೇಂದ್ರ ಫಡ್ನವಿಸ್ ಅವರು ಈಗ ಮಹಾರಾಷ್ಟ್ರದ ಹೊಸ ಮುಖ್ಯಮಂತ್ರಿ.
54 ವರ್ಷ ವಯಸ್ಸಿನ ದೇವೇಂದ್ರ ಫಡ್ನವಿಸ್ ಈ ಹಿಂದೆ ಎರಡು ಸಲ ಮಹಾರಾಷ್ಟ್ರದ ಮುಖ್ಯಮಂತ್ರಿ ಆಗಿ ಕಾರ್ಯನಿರ್ವಹಿಸಿದ್ದರು. ಇದೀಗ ಅವರು ಮತ್ತೊಂದು ಬಾರಿಗೆ ಮುಖ್ಯಮಂತ್ರಿ. ಈ ಹಿಂದೆ ಮುಖ್ಯಮಂತ್ರಿ ಆಗಿ ಕಾರ್ಯ ನಿರ್ವಹಿಸಿದ್ದ ಏಕನಾಥ ಶಿಂದೆ ಮತ್ತು ಉಪಮುಖ್ಯಮಂತ್ರಿಯಾಗಿ ಕಾರ್ಯನಿರ್ವಹಿಸಿದ್ದ ಅಜಿತ್ ಪವಾರ್ ಅವರು ದೇವೇಂದ್ರ ಪಡ್ನವಿಸ್ ಅವರ ಸಚಿವ ಸಂಪುಟದಲ್ಲಿ ಹೊಸದಾಗಿ ಉಪಮುಖ್ಯಮಂತ್ರಿಯಾಗುತ್ತಿರುವುದು ವಿಶೇಷ.
ಮಹಾರಾಷ್ಟ್ರದ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಭರ್ಜರಿ ಗೆಲುವು ದಾಖಲಿಸಿದೆ.
ನಾಗ್ಪುರ ನೈರುತ್ಯ ಕ್ಷೇತ್ರದ ಅಭ್ಯರ್ಥಿಯಾಗಿ ಕಣಕ್ಕಿಳಿದಿರುವ ದೇವೇಂದ್ರ ಫಡಣವೀಸ್ ಆರನೇ ಬಾರಿ ಶಾಸಕರಾಗಿ ಆಯ್ಕೆಯಾಗಿದ್ದಾರೆ.
ಹೆಜ್ಜೆ ಗುರುತುಗಳು…
1989ರಲ್ಲಿ 22ನೇ ವಯಸ್ಸಿಗೆ ನಾಗ್ಪುರ ನಗರ ಪಾಲಿಕೆಯ ಕಾರ್ಪೊರೇಟರ್ ಆಗಿ ಆಯ್ಕೆ
1997ರಲ್ಲಿ 27ನೇ ವಯಸ್ಸಿಗೆ ಕಿರಿಯ ಮೇಯರ್ ಆಗಿ ನೇಮಕ
1999-2004ರಲ್ಲಿ ಮೊದಲ ಬಾರಿಗೆ ವಿಧಾನಸಭೆ ಚುನಾವಣೆ ಸ್ಪರ್ಧಿಸಿ ಗೆಲುವು ಸಾಧಿಸಿದರು. 2004-2009, 2009-2014, 2014-2019, 2019-2024ರವರೆಗೂ ಶಾಸಕರಾಗಿ ಐದು ಸಲ ಆಯ್ಕೆಯಾದರು. ಇದೀಗ ಮತ್ತೆ ಗೆಲುವು ದಾಖಲಿಸುವ ಮೂಲಕ 6ನೇ ಬಾರಿಗೆ ಶಾಸಕರಾಗಿದ್ದಾರೆ.
2014- 2019 ಮುಖ್ಯಮಂತ್ರಿಯಾಗಿದ್ದರು.
2019ರಿಂದ 2022ರವರೆಗೆ ವಿಧಾನಸಭೆಯ ವಿರೋಧ ಪಕ್ಷದ ನಾಯಕರಾಗಿದ್ದರು.2022ರಿಂದ ಉಪಮುಖ್ಯಮಂತ್ರಿಯಾಗಿದ್ದಾರೆ.