ಬೆಳಗಾವಿ: ಯಕ್ಸಂಬಾದಲ್ಲಿ ಸೋಮವಾರ ನಸುಕಿನ 3:00 ಗಂಟೆ ಸುಮಾರಿಗೆ ವ್ಯಕ್ತಿಯೊಬ್ಬನ ತಲೆ ಮೇಲೆ ಕಲ್ಲು ಎತ್ತಿ ಹಾಕಿ ಕೊಲೆಗೈಯಲಾಗಿದೆ.

ಮಹೇಶ ಕುರ್ಣಿ(48) ಕೊಲೆಯಾದ ವ್ಯಕ್ತಿ. ಯಕ್ಸಂಬಾ ಬಿರೇಶ್ವರ ಕಾಲೋನಿ ಬಳಿ ಈ ಕೊಲೆ ನಡೆದಿದೆ. ಕೊಲೆಗೆ ಕಾರಣ ತಿಳಿದು ಬಂದಿಲ್ಲ. ಸದಲಗಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.