ಬೆಳಗಾವಿ : ಬೆಳಗಾವಿ ಬಳಿಯ ಕಂಗ್ರಾಳಿ ಕೆ.ಎಚ್. ಗ್ರಾಮದಲ್ಲಿ ಮೂರು ವರ್ಷದ ಮಗುವನ್ನು ಭೀಕರವಾಗಿ ಕೊಲೆ ಮಾಡಲಾಗಿದೆ ಎಂಬ ಆರೋಪ ಕೇಳಿ ಬಂದಿದೆ.

ಸಪ್ನಾ ನಾವಿ ಎಂಬಾಕೆ ಮೂರು ವರ್ಷದ ಮಗು ಸಮೃದ್ಧಿಯನ್ನು ಕೊಲೆ ಮಾಡಿದ್ದಾಳೆ ಎಂಬ ಆರೋಪ ವ್ಯಕ್ತವಾಗಿದ್ದು ಇಂದು ಬೆಳಗ್ಗೆ ಈ ಘಟನೆ ನಡೆದಿದೆ.

ಬಾಲಕಿ ಸಮೃದ್ಧಿ ಅಜ್ಜಿ ಮತ್ತು ಚಿಕ್ಕಪ್ಪ, ಸಪ್ನಾ ಮೇಲೆ ಈ ಕೊಲೆಯ ಆರೋಪ ಮಾಡಿದ್ದಾರೆ. ಮೊದಲ ಪತ್ನಿಯ ನಿಧನದಿಂದ ಎರಡನೇ ಮದುವೆಯಾಗಿದ್ದ ರಾಯಣ್ಣ ನಾವಿ ಸಿಆರ್ ಪಿಎಫ್ ನಲ್ಲಿ ಯೋಧರಾಗಿದ್ದಾರೆ.

ರಾಯಣ್ಣ ಅವರ ಕುಟುಂಬ ಮೊದಲ ಪತ್ನಿ ಭಾರತಿ ಅವರನ್ನು ಕೊಲೆ ಮಾಡಿದ ಆರೋಪ ಎದುರಿಸುತ್ತಿದೆ. ಈ ಬಗ್ಗೆ 2021 ರಲ್ಲಿ ನಾಗಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿತ್ತು. ಆ ಪ್ರಕರಣದಲ್ಲೂ ರಾಯಣ್ಣ ಆರೋಪಿಯಾಗಿತ್ತು. ಅಂದು ತಾಯಿಯನ್ನು ಕೊಲ್ಲಲಾಗಿತ್ತು, ಇಂದು ಮಗುವನ್ನು ಕೊಂದ ಆರೋಪ ರಾಯಣ್ಣ ಕುಟುಂಬದ ಮೇಲಿದ್ದು ಬೆಳಗಾವಿ ಎಪಿಎಂಸಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.