ಬೆಳಗಾವಿ: ನಗರದ ಇಂಡಾಲಕೋ ಫ್ಯಾಕ್ಟರಿ ಒಳಗಡೆ 18ರ ರಾತ್ರಿ 10 ಗಂಟೆಗೆ ಪ್ರತ್ಯಕ್ಷವಾದ ಹುಲಿರಾಯ ಕಂಡು ಫ್ಯಾಕ್ಟರಿಯಲ್ಲಿದ್ದ ಕಾರ್ಮಿಕರಲ್ಲಿ ಭಯದ ವಾತಾವರಣ ಹುಟ್ಟಿಸಿದೆ.
ಅರಣ್ಯ ಇಲಾಖೆ ಅಧಿಕಾರಿಗಳು ಸ್ಥಳ ಪರಿಶೀಲಿಸಿ ಹೆಜ್ಜೆ ಗುರುತು ನೋಡಿ ಹುಲಿ ಎಂದು ಪತ್ತೆ ಹಚ್ಚಲಾಗಿದೆ. ನಗರದಲ್ಲಿ ಮೇಲಿಂದಮೇಲೆ ವನ್ಯ ಜೀವಿಗಳ ಆಗಮನ ತಾನವಾಗಿದೆ ಬೆಳಗಾವಿ ನಗರದಲ್ಲಿ ಕಳೆದ ವಾರವೇ ಗಜರಾಜನ ದರ್ಶನವಾಗಿತ್ತು. ಇವಾಗ ಹುಲಿರಾಯನ ದರ್ಶನವಾಗಿದೆ. ಇಂಡಲಾಕೋ ಫ್ಯಾಕ್ಟರಿಯ ಸುತ್ತ ಮುತ್ತಲಿನ ಪ್ರದೇಶದಲ್ಲಿ ಭಯದ ವಾತಾವರಣ ಸೃಷ್ಟಿಯಾಗಿದೆ.