ಬೆಳಗಾವಿ: ಇತ್ತೀಚೆಗೆ ಬೆಳಗಾವಿ ಜಿಲ್ಲೆಯ ನಗರದಲ್ಲಿ ನೀರು ಸರಬರಾಜು ಯೋಜನೆ ಹೆಸರು ಹೇಳಿಕೊಂಡು ನಳ ಪರಿಶೀಲನೆ, ಬಿಲ್ ಪರಿಶೀಲನೆ ಮಾಡಲು ಬಂದಿರುವುದಾಗಿ ಹೇಳಿ, ಮನೆಯಲ್ಲಿ ಒಬ್ಬರೇ ಮಹಿಳೆಯಿರುವಾಗ ಮನೆಗಳಿಗೆ ಭೇಟಿ ನೀಡಿ, ಕಳವು ಮಾಡುವ ತಂಡಗಳ ಕುರಿತು ಮಾಹಿತಿ ಕಂಡು ಬಂದಿರುತ್ತದೆ. ಆದ್ದರಿಂದ ಸಾರ್ವಜನಿಕರು ಹೀಗೆ ಹೇಳಿಕೊಂಡು ಬರುವ ಜನರಿಗೆ ಮೊದಲು ಅವರ ಗುರುತಿನ ಚೀಟಿ ಪರಿಶೀಲಿಸಿ, ಅವರನ್ನು ಮನೆಯ ಗೇಟ್ ಹತ್ತಿರವೇ ನಿಲ್ಲಿಸಿ ವಿಚಾರಿಸಬೇಕು. ಸಂಶಯ ಕಂಡು ಬಂದಲ್ಲಿ ದೂರವಾಣಿ 9886778294, 6263876592 ಸಂಖ್ಯೆಗಳಿಗೆ ಕರೆ ಮಾಡಿ ಖಾತ್ರಿ ಪಡಿಸಿಕೊಳ್ಳಬೇಕು ಎಂದು ಬೆಳಗಾವಿ ಮಹಾನಗರ ಪಾಲಿಕೆ ಆಯುಕ್ತರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.