ಬೆಳಗಾವಿ: ಕುಡುಕ ಪತಿಯನ್ನು ಕೊಂದ ಮಹಿಳೆಯನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ.

ಈ ಘಟನೆ ಚಿಕ್ಕೋಡಿ ತಾಲೂಕಿನ ಉಮರಾಣಿಯಲ್ಲಿ ನಡೆದಿದೆ ಎಂದು ವರದಿಯಾಗಿದ್ದು. ಆರೋಪಿ ಮಹಿಳೆ ಮೊದಲು ಹಣಕ್ಕಾಗಿ ಪೀಡಿಸುತ್ತಿದ್ದ ಕುಡುಕ ಗಂಡನ ಕತ್ತು ಹಿಸುಕಿ, ನಂತರ ಅವನ ಮುಖವನ್ನು ಕಲ್ಲಿನಿಂದ ಜಜ್ಜಿದ್ದಾಳೆ. ದೇಹವನ್ನು ತನ್ನ ಮನೆಯಿಂದ ಹೊರಕ್ಕೆ ಸಾಗಿಸಲು ನಂತರ ಆತನ ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿದ್ದಾಳೆ ಎಂದು ಪೊಲೀಸರು ಹೇಳಿದ್ದಾರೆ.

ಪೊಲೀಸರ ಪ್ರಕಾರ, ಡಿ.10ರಂದು ಬೆಳಗಾವಿಯ ಚಿಕ್ಕೋಡಿ ತಾಲೂಕಿನ ಉಮರಾಣಿ ಗ್ರಾಮದಲ್ಲಿ 40 ವರ್ಷದ ಶ್ರೀಮಂತ ಇಟ್ನಾಲಿ ಎಂಬಾತನ ಶವದ ತುಂಡುಗಳು ಪತ್ತೆಯಾಗಿವೆ.
ಗುರುವಾರ ಪತ್ರಿಕಾಗೋಷ್ಠಿಯನ್ನುದ್ದೇಶಿಸಿ ಮಾತನಾಡಿದ ಎಸ್‌ಪಿ ಭೀಮಾಶಂಕರ ಗುಳೇದ ಅವರು, ‘‘ ಪ್ರಕರಣದ ಸಂಬಂಧ ಉಪ ಪೊಲೀಸ್ ವರಿಷ್ಠಾಧಿಕಾರಿ ನೇತೃತ್ವದಲ್ಲಿ ಮೂವರು ತಂಡ ಗ್ರಾಮದಲ್ಲಿ ಮೊಕ್ಕಾಂ ಹೂಡಿ ಪ್ರಕರಣದ ತನಿಖೆ ನಡೆಸುತ್ತಿದೆ ಎಂದು ತಿಳಿಸಿದ್ದಾರೆ.

ಪತ್ನಿ ಸಾವಿತ್ರಿಯನ್ನು ವಿಚಾರಣೆಗಾಗಿ ಠಾಣೆಗೆ ಕರೆತರಲಾಯಿತು. ಆರಂಭದಲ್ಲಿ, ಅವಳು ಒಪ್ಪಲಿಲ್ಲ ಆದರೆ ನಂತರ ಅವಳು ತನ್ನ ಅಪರಾಧವನ್ನು ಒಪ್ಪಿಕೊಂಡಳು” ಎಂದು ಎಸ್ಪಿ ಹೇಳಿದ್ದಾರೆ. ಅವರ ಪ್ರಕಾರ, ಘಟನೆ ಡಿಸೆಂಬರ್ 8 ರಂದು ನಡೆದಿದೆ. ಕುಡುಕನಾಗಿದ್ದ ಈ ವ್ಯಕ್ತಿ ಹಣಕ್ಕಾಗಿ ಪತ್ನಿಯನ್ನು ಹೆಚ್ಚಾಗಿ ಪೀಡಿಸುತ್ತಿದ್ದ ಎಂದು ಪೊಲೀಸರು ತಿಳಿಸಿದ್ದಾರೆ.
ಕೊಲೆಯಾದ ದಿನ ಆಕೆಯ ಮಾಲೀಕತ್ವದ ಜಮೀನಿನ ವಿಚಾರವಾಗಿ ಆಕೆಯೊಂದಿಗೆ ಜಗಳವಾಡಿದ್ದ.ಆತ ಹೆಂಡತಿ ಭೂಮಿಯನ್ನು ಮಾರಿ ಹೊಸ ಮೋಟಾರ್‌ಬೈಕ್ ಖರೀದಿಸಬೇಕೆಂದು ಬಯಸಿದ್ದ. ಇದಕ್ಕಾಗಿ ಪತ್ನಿಗೆ ಹೊಲ ಮಾರುವಂತೆ ಪೀಡಿಸುತ್ತಿದ್ದ. ಇದನ್ನು ಸಹಿಸಲಾಗದೆ, ರಾತ್ರಿ ಹೊರಗೆ ಮಲಗಿದ್ದ ಆತನನ್ನು ಕೊಂದಿರುವುದಾಗಿ ಪತ್ನಿ ತಪ್ಪೊಪ್ಪಿಕೊಂಡಿದ್ದಾಳೆ. ಅವಳು ಮೊದಲು ಕತ್ತು ಹಿಸುಕಿದಳು ಮತ್ತು ಆತ ಪ್ರಜ್ಞಾಹೀನನಾದ ನಂತರ ಹತ್ತಿರದಲ್ಲಿ ಬಿದ್ದಿದ್ದ ಬಂಡೆಯಿಂದ ಆತನ ಮುಖವನ್ನು ಜಜ್ಜಿದ್ದಾಳೆ. ಅವಳು ನಂತರ ಬಂಡೆಯನ್ನು ಬಾವಿಗೆ ಎಸೆದಳು” ಎಂದು ಎಸ್ಪಿ ಹೇಳಿದರು. ಸಾಗಿಸಲು ಸುಲಭವಾಗುವಂತೆ, ಅವಳು ದೇಹವನ್ನು ಎರಡು ತುಂಡುಗಳಾಗಿ ಕತ್ತರಿಸಿ ಬ್ಯಾರೆಲ್‌ನಲ್ಲಿ ಸಾಗಿಸಿದಳು ಎಂದರು. ಆರೋಪಿಯನ್ನು ವಶಕ್ಕೆ ತೆಗೆದುಕೊಳ್ಳಲಾಗಿದೆ.