ಕುಂದಾಪುರ: ಫಿಟ್ನೆಸ್‌ ಪ್ರಿಯರಾಗಿದ್ದ ಹಾಗೂ ಉತ್ತಮ ಹಾಡುಗಾರನೂಆಗಿದ್ದ ವೈದ್ಯರೊಬ್ಬರು ಹೃದಯಾಘಾತದಿಂದ ಸಾವಿಗೀಡಾಗಿದ್ದಾರೆ. ಕುಂದಾಪುರ ಶ್ರೀಮಾತಾ ಖಾಸಗಿ ಆಸ್ಪತ್ರೆಯ ವೈದ್ಯ ಡಾ.ಸತೀಶ ಪೂಜಾರಿ (54) ಮೃತಪಟ್ಟವರು.ಇಂದು ಮುಂಜಾನೆ ಕೋಟತಟ್ಟುವಿನ ತಮ್ಮ ಮನೆಯಲ್ಲಿ ಸತೀಶ ಹೃದಯಾಘಾತದಿಂದ ಮೃತಪಟ್ಟಿದ್ದಾರೆ. ಶ್ರೀಮಾತಾ ಆಸ್ಪತ್ರೆಯ ಮಾಲೀಕರೂ ಆಗಿದ್ದ ಡಾ. ಸತೀಶ್ ಪೂಜಾರಿ, ಫಿಟ್ನೆಸ್ ಕುರಿತು ಅತಿ ಹೆಚ್ಚು ಒಲವು ಹೊಂದಿದ್ದ ಡಾ.ಸತೀಶ್ ಪೂಜಾರಿ, ವ್ಯಾಯಾಮ ಹಾಗೂ ಜಿಮ್‌ ಮೂಲಕ ದೇಹವನ್ನು ಸದೃಢವಾಗಿ ಕಾಪಾಡಿಕೊಂಡಿದ್ದರು.ತಮ್ಮ ವಿಭಿನ್ನ ಶೈಲಿಯ ಹಾಡುಗಾರಿಕೆಯ ಮೂಲಕವೂ ಜಿಲ್ಲೆಯಲ್ಲಿ ಗುರುತಿಸಿಕೊಂಡಿದ್ದರು. ಸಾಂಸ್ಕೃತಿಕ ಮತ್ತು ಸಂಗೀತ ಕಾರ್ಯಕ್ರಮಗಳಿಗೆ ಸದಾ ಪ್ರೋತ್ಸಾಹ ನೀಡುತ್ತಿದ್ದರು. ಎಸ್‌. ಜಾನಕಿ, ರಾಜೇಶ್‌, ಗುರುಕಿರಣ್‌ ಮುಂತಾದವರ ಜೊತೆಗೆ ರಸಮಂಜರಿಗಳಲ್ಲಿ ಹಾಡಿದ್ದರು. ಮೃತರಿಗೆ ಪತ್ನಿ ಮತ್ತು ಮಗ ಇದ್ದಾರೆ.