ಬೆಳಗಾವಿ : ಯುವಕನೊಬ್ಬ ತನಗೆ ಕಚ್ಚಿದ ಹಾವನ್ನೇ ಹಿಡಿದುಕೊಂಡು ಬಂದು ವೈದ್ಯರಿಗೆ ತೋರಿಸಲು ಮುಂದಾದ ಘಟನೆ ಬೆಳಗಾವಿಯಲ್ಲಿ ಬೆಳಕಿಗೆ ಬಂದಿದೆ.

ಬೆಳಗಾವಿ ಸಮೀಪದ ಹುಂಚಾನಟ್ಟಿ ಗ್ರಾಮದ ಶಾಹೀದ್ ಎಂಬಾತ ಹಾವು ಹಿಡಿದು ನಂತರ ಅದನ್ನು ಸುರಕ್ಷಿತ ಸ್ಥಳಕ್ಕೆ ಬಿಡಲು ಮುಂದಾಗಿದ್ದ. ಆದರೆ, ಆ ಸಂದರ್ಭದಲ್ಲಿ ಅದು ಆಕಸ್ಮಿಕವಾಗಿ ಕಚ್ಚಿತ್ತು. ಆಗ ಆತ ಹಾವಿನೊಂದಿಗೆ ಬೆಳಗಾವಿಗೆ ಬಂದಿದ್ದಾನೆ. ಅದು ಯಾವ ಹಾವು ? ಅದರಲ್ಲಿ ವಿಷ ಎಷ್ಟು ಇರುತ್ತದೆ ? ಕಚ್ಚಿದ ನಂತರ ಹೇಗೆ ವಿಷ ಬಿಡುತ್ತದೆ ಎನ್ನುವುದನ್ನು ವೈದ್ಯರಿಗೆ ತೋರಿಸಲು ಡಬ್ಬದಲ್ಲಿ ಹಾವನ್ನು ಹಾಕಿಕೊಂಡು ಆಗಮಿಸಿದ್ದ. ಇದನ್ನು ನೋಡಿದ ಜನ ಭಯಗೊಂಡು ಮೊಬೈಲ್ ನಲ್ಲಿ ಚಿತ್ರೀಕರಿಸಿದ್ದಾರೆ. ಅದನ್ನು ನೋಡಿದ ಆತ ಹಾವನ್ನು ವೈದ್ಯರಿಗೆ ತೋರಿಸದೆ ವೈದ್ಯರ ಬಳಿ ಚಿಕಿತ್ಸೆ ಪಡೆದುಕೊಂಡು ಅಲ್ಲಿಂದ ಜಾಗ ಖಾಲಿ ಮಾಡಿದ್ದಾನೆ.