ಬೆಳಗಾವಿ: ಟಿಪ್ಪರ ಹಾಗೂ ಬೈಕ್‌ ನಡುವೆ ಡಿಕ್ಕಿ ಸಂಭವಿಸಿ ಬೈಕ್‌ ಸವಾರ ಸ್ಥಳದಲ್ಲೇ ಸಾವನ್ನಪ್ಪಿರುವ ಗಟನೆ ಅಥಣಿ ಪಟ್ಟಣದ ಜತ್‌ ರಸ್ತೆಯ ಹೊಸೆಟ್ಟಿ ಕ್ರಾಸ್‌ ಬಳಿ ನಡೆದಿದೆ.

ಈ ಅಪಘಾತದಲ್ಲಿ ಸಾವನ್ನಪ್ಪಿದು ಯುವಕನನ್ನು ನಾಗನೂರು ಪಿಕೆ ಗ್ರಾಮ ದರ್ಶನ ಶಿವಾನಂದ ಕಾಂಬಳೆ ಎಂದು ಗುರುತಿಸಲಾಗಿದೆ. ಈತ ನಾಗನೂರು ಪಿಕೆ ಗ್ರಾಮದಿಂದ ಬೈಕ್‌ ಮೇಲೆ ಕೆಲಸಕ್ಕಾಗಿ ತೆರಳುವಾಗ ಟಿಪ್ಪರ್‌ ಡಿಕ್ಕಿ ಹೊಡೆದೆ. ಟಿಪ್ಪರ ಯುವಕನ ತೆಲೆಯ ಮೇಲೆ ಹರಿದಿರುವದರಿಂದ ದರ್ಶನ ಸ್ಥಳದಲ್ಲೇ ಸಾವನ್ನಪ್ಪಿದ್ದಾನೆ. ಈ ಕುರಿತು ಅಥಣಿ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.