ಯಲ್ಲಾಪುರ: ಸ್ಕೂಟರ್‌ ಸವಾರನ ಮೇಲೆ ಮರ ಬಿದ್ದು ಮೃತಪಟ್ಟ ಘಟನೆ ಬುಧವಾರ ಬೆಳಿಗ್ಗೆ ಉತ್ತರ ಕನ್ನಡ ಜಿಲ್ಲೆಯ ಯಲ್ಲಾಪುರ ತಾಲೂಕಿನ ಮಂಚಿಕೇರಿ ಸಮೀಪದ ಮಾಳಕೊಪ್ಪ ಶಾಲೆಯ ಎದುರು ನಡೆದಿದೆ ಎಂದು ವರದಿಯಾಗಿದೆ.

ಮೃತ ವ್ಯಕ್ತಿಯನ್ನು ಸ್ಥಳೀಯ ಕಬ್ಬಿನಗದ್ದೆಯ ವಿನಯ ಮಂಜುನಾಥ ಗಾಡಿಗ (25) ಗುರುತಿಸಲಾಗಿದೆ. ಈತ ಮನೆಯಿಂದ ತನ್ನ ಸ್ಕೂಟರಿನಲ್ಲಿ ಕೂಲಿ ಕೆಲಸಕ್ಕೆ ಹೋಗುತ್ತಿದ್ದಾಗ ಆತನ ಮೇಲೆ ಬೃಹತ್‌ ಮರ ಬಿದ್ದಿದ್ದು, ಆತ ಸ್ಥಳದಲ್ಲಿಯೇ ಮೃತಪಟ್ಟಿದ್ದಾನೆ ಎನ್ನಲಾಗಿದೆ. ಜಿಲ್ಲೆಯಲ್ಲಿ ಕಳೆದ ಕೆಲ ದಿನಗಳಿಂದ ಭಾರಿ ಗಾಳೆ ಸುರಿಯತ್ತಿದ್ದು, ಜೋರಾದ ಗಾಳಿಗೆ ಮರ ಬಿದ್ದಿದೆ ಎನ್ನಲಾಗಿದೆ.
ತಹಶೀಲ್ದಾರ ಅಶೋಕ ಭಟ್ಟ ಸ್ಥಳಕ್ಕೆ ಭೇಟಿ ‌ನೀಡಿ ಪರಿಶೀಲಿಸಿದ್ದು, ಮೃತರ ಕುಟುಂಬಕ್ಕೆ ಸಾಂತ್ವನ ಹೇಳಿದ್ದಾರೆ. ಸಿಪಿಐ ರಮೇಶ ಹಾನಾಪುರ, ಪಿಎಸ್ಐ ಸಿದ್ದಪ್ಪ ಗುಡಿ ,ಅರಣ್ಯಾಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಸ್ಥಳದಲ್ಲಿ ಕುಟುಂಬದವರ ಮತ್ತು ಸಂಬಂದಿಕರ ರೋಧನ ಮುಗಿಲು ಮುಟ್ಟಿದೆ.ನಂತರ ಮೃತ ದೇವನ್ನು ತಾಲೂಕಾಸ್ಪತ್ರೆಯಲ್ಲಿಡಲಾಗಿದ್ದು ಶಿರಸಿ ಸಹಾಯಕ ಕಮಿಶನರ್ ಕಾವ್ಯಾರಾಣಿ ಭೇಟಿ ನೀಡಿ ಸಾಂತ್ವನ ಹೇಳಿದ್ದಾರೆ