ಮಂಗಳೂರು: ಬ್ರೆಜಿಲ್ ನ ತಾಟಿಯಾನೆ ಮತ್ತು ಮಂಗಳೂರಿನ ಆದಿತ್ಯ ಅವರ ವಿವಾಹ ಮಂಗಳೂರು ರಮಣ ಪೈ ಸಭಾಂಗಣದಲ್ಲಿ ಜಿ ಎಸ್ ಬಿ ಸಂಪ್ರದಾಯದ ಪ್ರಕಾರ ನೆರವೇರಿದೆ. ಕರಂಗಲ್ಪಾಡಿ ನಿವಾಸಿ ಆದಿತ್ಯ ಎಂಟು ವರ್ಷಗಳ ಹಿಂದೆ ಉದ್ಯೋಗಕ್ಕೆ ಬ್ರೆಜಿಲ್ ಗೆ ಹೋಗಿದ್ದರು. 2019ರಲ್ಲಿ ತಾಟಿಯಾನೆ ಎಂಬ ಯುವತಿಯ ಪರಿಚಯವಾಗಿ ಇದೀಗ ಇಬ್ಬರು ವಿವಾಹವಾಗುವರೆಗೂ ಸ್ನೇಹ ಮುಂದುವರಿದಿತ್ತು. ಮನೆಯವರ ಆಶೀರ್ವಾದದ ಪ್ರಕಾರ ಇಬ್ಬರು ಇದೀಗ ಸಪ್ತಪದಿ ತುಳಿದಿದ್ದಾರೆ. ವಧು-ವರರ ಕುಟುಂಬಸ್ಥರು ಭಾರತೀಯ ಸಂಪ್ರದಾಯದಂತೆ ಅಗ್ನಿಸಾಕ್ಷಿಯಾಗಿ ಈಗ ವೈವಾಹಿಕ ಜೀವನಕ್ಕೆ ಕಾಲಿಟ್ಟಿದ್ದಾರೆ.