ಬೆಳಗಾವಿ : ಬೆಳಗಾವಿಯಲ್ಲಿ ರಾತ್ರೋರಾತ್ರಿ ಬಿಜೆಪಿ ಮುಖಂಡನ ಮೇಲೆ ದೂರು ದಾಖಲು ಮಾಡಿದ ಘಟನೆ ನಡೆದಿದೆ. ತನ್ನ ಮೇಲೆ ಸುಳ್ಳು ಕೇಸು ಹಾಕುವ ಬೆದರಿಕೆ ಒಡ್ಡಿದ್ದಾರೆ ಎಂದು ಯುವತಿ ಪೊಲೀಸ್ ಆಯುಕ್ತರಿಗೆ ದೂರು ನೀಡಿದ್ದಾಳೆ. ಬಿಜೆಪಿ ನಾಯಕನಿಂದ ನನ್ನ ಸಂಸಾರ ಹಾಳಾಗಲು ಕಾರಣವಾಗಿದೆ. ಜತೆಗೆ ಆತನಿಂದ ನನ್ನ ಮೇಲೆ ನಿರಂತರ ಹಲ್ಲೆ ನಡೆಯುತ್ತಿದೆ ಎಂದು ಯುವತಿ ಆರೋಪ ಮಾಡಿದ್ದಾಳೆ.

ಕೆಲ ದಿನಗಳ ಹಿಂದೆ ಈ ಮಹಿಳೆ ವಿಷ ಸೇವನೆ ಮಾಡಿ ಆತ್ಮಹತ್ಯೆಗೆ ಯತ್ನಿಸಿದ್ದಳು. ಆಗ ನನ್ನ ಗಂಡ ಮತ್ತು ಮಾವ ವರದಕ್ಷಿಣೆ ಸಂಬಂಧ ನನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ಆರೋಪಿಸಿದ್ದಳು. ಇದೀಗ ಈ ಮಹಿಳೆ ಬಿಜೆಪಿ ನಾಯಕ ಮತ್ತು ಆತನ ಮಗ ನನಗೆ ಲೈಂಗಿಕ ಕಿರುಕುಳ ಕೊಟ್ಟಿದ್ದಾರೆ. ಮಾತ್ರವಲ್ಲ ಒತ್ತಾಯಪೂರ್ವಕವಾಗಿ ನನಗೆ ಮದುವೆ ಮಾಡಿಸಿದವನು ಆ ಬಿಜೆಪಿ ನಾಯಕ ಎಂದು ದೂರು ನೀಡಿದ್ದಾಳೆ.