Join The Telegram | Join The WhatsApp |
ದೆಹಲಿ :
ನೀವು ನಿಮ್ಮ ಆಧಾರ್ ಕಾರ್ಡ್ ಹಾಗೂ ಪ್ಯಾನ್ ಕಾರ್ಡ್ ಲಿಂಕ್ ಮಾಡಿಸಬೇಕೆಂದು ವರ್ಷಗಳಿಂದ ಸರ್ಕಾರ ಹೇಳುತ್ತಿದ್ದರೂ ಇನ್ನೂ ಕೂಡ ಹಲವರು ತಮ್ಮ ಪ್ಯಾನ್ ಕಾರ್ಡ್ ಆಧಾರ್ ಲಿಂಕ್ ಮಾಡಿಸಿಲ್ಲ. ಹಾಗಾಗಿ ತೆರಿಗೆ ಇಲಾಖೆಯು ಅವರಿಗೆ ಕೊನೆಯ ಗಡುವು ನೀಡಿದೆ. ವೈಯಕ್ತಿಕ ತೆರಿಗೆದಾರರು ತಮ್ಮ ಆಧಾರ್ ಕಾರ್ಡ್ ಅನ್ನು ಪ್ಯಾನ್ ಕಾರ್ಡ್‌ನೊಂದಿಗೆ ಲಿಂಕ್ ಮಾಡುವುದು ಕಡ್ಡಾಯವಾಗಿದೆ. ಒಂದು ವೇಳೆ ನೀವು ಹಾಗೆ ಮಾಡದಿದ್ದಲ್ಲಿ ನಿಮ್ಮ ಆದಾಯ ತೆರಿಗೆ ರಿಟರ್ನ್ ಅನ್ನು ಪ್ರಕ್ರಿಯೆಗೊಳಿಸಲಾಗುವುದಿಲ್ಲ.
1961 ರ ಆದಾಯ ತೆರಿಗೆ ಕಾಯಿದೆಯ ಪ್ರಕಾರ, ವಿನಾಯಿತಿ ವರ್ಗಕ್ಕೆ ಸೇರದ ಎಲ್ಲಾ ಪ್ಯಾನ್ ಹೊಂದಿರುವವರು 2023ರ ಏಪ್ರಿಲ್ ಒಳಗಾಗಿ ತಮ್ಮ ಆಧಾರ್ ಪ್ಯಾನ್ ಲಿಂಕ್ ಮಾಡಿಸುವಂತೆ ಎಚ್ಚರಿಕೆ ನೀಡಲಾಗಿದೆ. ಯಾರಾದರೂ ಪ್ಯಾನ್ ಗಳನ್ನು ಲಿಂಕ್ ಮಾಡದಿದ್ದರೆ ಏಪ್ರಿಲ್ 1, 2023 ರಿಂದ ಅಂಥಹವರ ಪ್ಯಾನ್ ಕಾರ್ಡ್ ಮಾನ್ಯತೆ ಕಳೆದುಕೊಳ್ಳಲಿದೆ.
ಆಧಾರ್‌ನೊಂದಿಗೆ ಪ್ಯಾನ್ ಅನ್ನು ಲಿಂಕ್ ಮಾಡಲು ಕೊನೆಯ ದಿನಾಂಕ ಮಾರ್ಚ್ 31, 2023. ಆದಾಯ ತೆರಿಗೆ ಇಲಾಖೆಯು ತನ್ನ ಅಧಿಕೃತ ಟ್ವಿಟರ್ ಖಾತೆಯಿಂದ ಈ ಎಚ್ಚರಿಕೆಯನ್ನು ನೀಡಿದೆ
ತೆರಿಗೆ ಇಲಾಖೆಯ ಇ-ಫೈಲಿಂಗ್ ವೆಬ್‌ಸೈಟ್‌ನಲ್ಲಿ ಇತ್ತೀಚಿನ ಅಪ್‌ಡೇಟ್‌ನ ಪ್ರಕಾರ, “11ನೇ ಮೇ, 2011 ರ ಅಧಿಸೂಚನೆ ಸಂಖ್ಯೆ. 37/2017 ರ ಪ್ರಕಾರ ವಿನಾಯಿತಿ ವರ್ಗದ ಅಡಿಯಲ್ಲಿ ಬರದ ಎಲ್ಲಾ ಪ್ಯಾನ್ ಹೊಂದಿರುವವರು ಮತ್ತು ಇನ್ನೂ ತಮ್ಮ ಆಧಾರ್ ಅನ್ನು ಪ್ಯಾನ್‌ನೊಂದಿಗೆ ಲಿಂಕ್ ಮಾಡಿಲ್ಲದವರು ಕೂಡಲೇ ಮಾಡುವಂತೆ ಕೋರಲಾಗಿದೆ. ಹಾಗೆ ಮಾಡಲು ವಿಫಲವಾದರೆ ಲಿಂಕ್ ಮಾಡದ ಪ್ಯಾನ್ ನಿಷ್ಕ್ರಿಯಗೊಳ್ಳಲು ಕಾರಣವಾಗುತ್ತದೆ.
Join The Telegram | Join The WhatsApp |