ದೆಹಲಿ:
ಆಧಾರ್ ಕಾರ್ಡ್‌ನಲ್ಲಿನ ಮಾಹಿತಿಗಳ ಉಚಿತ ಪರಿಷ್ಕರಣೆಗೆ ಇನ್ನು 4 ದಿನಗಳಷ್ಟೇ ಅವಕಾಶ.
ಆಧಾರ್ ಕಾರ್ಡ್‌ನಲ್ಲಿನ ವಿಳಾಸ, ಜನ್ಮದಿನ, ವಯಸ್ಸು, ಲಿಂಗ, ಸಂಬಂಧ, ಗುರುತು ದೃಢೀಕರಣ ಪತ್ರದ ದಾಖಲೆ ಮೊದಲಾದ ಮಾಹಿತಿಗಳನ್ನು ದೃಢೀಕೃತ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗ ಳನ್ನು ಲಗತ್ತಿಸಿ ಉಚಿತವಾಗಿ ಡಿ.14ರವರೆಗೂ ಪರಿಷ್ಕರಣೆ ಮಾಡಿಕೊಳ್ಳಬಹುದಾಗಿದೆ. ಆಧಾರ್ ಕಾರ್ಡ್‌ದಾರರ ಮೊಬೈಲ್ ನಂಬರ್ ಆಧಾರ್ ಸಂಖ್ಯೆಗೆ ಜೋಡಣೆ ಆಗಿರಬೇಕು. ಕಾರ್ಡ್‌ದಾರರೇ ಅಂತರ್ಜಾಲ ಸಂಪರ್ಕ ಮೂಲಕ ಸ್ವತಃ ಪರಿಷ್ಕರಿಸಿಕೊಳ್ಳಬಹುದಾಗಿದೆ. ಈ ಉಚಿತ ಪರಿಷ್ಕರಣೆ ಸೌಲಭ್ಯ ‘ಮೈಆಧಾರ್’ ಪೋರ್ಟಲ್‌ನಲ್ಲಷ್ಟೇ ಲಭ್ಯವಿದೆ. ಹೊಸದಾಗಿ ಖಾತೆ ತೆರೆಯಬೇಕು. ಅಗತ್ಯ ದಾಖಲೆಗಳ ಸ್ಕ್ಯಾನ್ ಮಾಡಿದ ಪ್ರತಿಗಳನ್ನು ಸಿದ್ಧಪಡಿಸಿಟ್ಟುಕೊಂಡು 12 ಅಂಕಿಗಳ ಆಧಾರ್ ಸಂಖ್ಯೆ ಮೂಲಕ ಲಾಗಿನ್ ಆಗಬೇಕು. ನೋಂದಾಯಿತ ಮೊಬೈಲ್‌ಗೆ ಒಟಿಪಿ ಬರುತ್ತದೆ. ಅದನ್ನು ದಾಖಲಿಸಿ ಮುಂದುವರಿಯಬೇಕು.
ಬದಲಿಸಬೇಕಾದ ಮಾಹಿತಿ ಮೇಲೆ ಕ್ಲಿಕ್ ಮಾಡಿ, ಪೂರಕ ದಾಖಲೆಗಳನ್ನು ಲಗತ್ತಿಸಿ ಕ್ಲಿಕ್ ಮಾಡಬೇಕು. ಬಳಿಕ ‘ಅಪ್‌ಡೇಟ್ ರಿಕ್ವೆಸ್ಟ್ ಸಂಖ್ಯೆ’ ಬರುತ್ತದೆ. ನಿಗದಿತ ಸಮಯದ ಬಳಿಕ ಖಾತೆ ಪ್ರವೇಶಿಸಿ ಪರಿಷ್ಕೃತ ಆಧಾರ್ ಕಾರ್ಡ್‌ನ ಇ-ಪ್ರತಿ ಡೌನ್‌ಲೋಡ್ ಮಾಡಿಕೊಳ್ಳಬಬಹುದು.