ಬೆಳಗಾವಿ : ಭಾರತೀಯ ಅಂಚೆ ಇಲಾಖೆ, ಅಂಚೆ ಅಧೀಕ್ಷಕರ ಕಚೇರಿ, ಅಂಚೆ ವಿಭಾಗ ಇವರ ಸಂಯುಕ್ತ ಆಶ್ರಯದಲ್ಲಿ ಜೂ. 14 ರಂದು ಬೆಳಗ್ಗೆ 9 ರಿಂದ ಸಂಜೆ 6 ಗಂಟೆಯವರೆಗೆ ಬೆಳಗಾವಿ ರಾಮದುರ್ಗ ಪ್ರಧಾನ ಕಚೇರಿ ಮತ್ತು ಕಿತ್ತೂರು ಉಪ ಅಂಚೆ ಕಚೇರಿಗಳಲ್ಲಿ ಆಧಾರ ಮೇಳ ಆಯೋಜಿಸಲಾಗಿದೆ.

ಆಧಾರ ಮೇಳದಲ್ಲಿ ಹೊಸ ಆಧಾರ ನೊಂದಣಿ ಮತ್ತು ಆಧಾರ ತಿದ್ದುಪಡಿ ಮಾಡಿಕೊಳ್ಳಬಹುದು ಎಂದು ಬೆಳಗಾವಿ ವಿಭಾಗ ಅಂಚೆ ಅಧೀಕ್ಷಕರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.