ಬೆಳಗಾವಿ : ಬೆಳಗಾವಿಯ ಶೇರಿಗಲ್ಲಿ-ರಾಮಲಿಂಗಖಿಂಡ ಗಲ್ಲಿಯಲ್ಲಿ ಗುರುವಾರ ಗೋಧೂಳಿ ಸುಮುಹೂರ್ತದಲ್ಲಿ “ಆಭಾರ್ ಚಹಾ” ಜನಸೇವೆಗೆ ತೆರೆದುಕೊಂಡಿದೆ.

ಬೆಳಗಾವಿಯ ಮಾಜಿ ಉಪಮೇಯರ್ ಸತೀಶ ಗೌರಗೊಂಡಾ ಅವರು ಆಭಾರ್ ಚಹಾಕ್ಕೆ ವಿಧ್ಯುಕ್ತವಾಗಿ ಚಾಲನೆ ನೀಡಿ ಶುಭ ಹಾರೈಸಿದರು. ಬಿಜೆಪಿ ನಾಯಕ ಹಾಗೂ ಸಕಲ ಮರಾಠ ಸಮಾಜದ ಧುರೀಣ ಕಿರಣ ಜಾಧವ, ನಗರಸೇವಕ ಸಂತೋಷ ಪೇಡ್ನೇಕರ,ಬೆಳಗಾವಿ ಮಹಾನಗರ ಪಾಲಿಕೆ ಮಾಜಿ ಸದಸ್ಯರಾದ ಪದ್ಮರಾಜ ವೈಜಣ್ಣವರ, ಶ್ಯಾಮ ಕೋಲಕಾರ ಸೇರಿದಂತೆ ಕುಲಕರ್ಣಿ ಗಲ್ಲಿ, ಮಠಗಲ್ಲಿ, ಶೇರಿಗಲ್ಲಿ, ಅನಂತಶಯನಗಲ್ಲಿ, ರಾಮಲಿಂಗ ಖಿಂಡಗಲ್ಲಿಯ ಸ್ನೇಹಿತರು ಆಗಮಿಸಿ ಶುಭ ಕೋರಿದರು. ಸಾಮಾಜಿಕ ಸೇವೆಯಲ್ಲಿ ಈಗಾಗಲೇ ಗುರುತಿಸಿಕೊಂಡು ಜನಾನುರಾಗಿಯಾಗಿ ಹೆಸರುವಾಸಿಯಾಗಿರುವ ಬ್ರಹ್ಮಾನಂದ ಜೇಡಿ (ಅಪ್ಪು) ಅವರ ಮಾಲಕತ್ತದಲ್ಲಿ ಆರಂಭವಾಗಿರುವ “ಆಭಾರ್ ಚಹಾ” ಆರಂಭಕ್ಕೆ ಅವರ ಧರ್ಮಪತ್ನಿ ಹಾಗೂ ಪುತ್ರಿಯರೇ ಹಿಂದಿನ ಶಕ್ತಿಯಾಗಿದ್ದಾರೆ.

“ಆಭಾರ್ ” ಆರಂಭಿಸುವ ಮೂಲಕ ಬೆಳಗಾವಿ ಜನತೆಗೆ ಶ್ರೇಷ್ಠ ಗುಣಮಟ್ಟದ ಚಹಾ ನೀಡುವುದು ಬ್ರಹ್ಮಾನಂದ ಜೇಡಿ ಅವರ ಕನಸಾಗಿದೆ.