This is the title of the web page
This is the title of the web page

Live Stream

March 2023
S M T W T F S
 1234
567891011
12131415161718
19202122232425
262728293031  

| Latest Version 9.4.1 |

State News

ಎಎಪಿ ರಾಷ್ಟ್ರೀಯ ರಾಜಕೀಯ ಪಕ್ಷ

Join The Telegram Join The WhatsApp

ಮಂಗಳೂರು, ಡಿ. 8- ಗುಜರಾತ್ ವಿಧಾನಸಭಾ ಚುನಾವಣಾ ಫಲಿತಾಂಶ ಬಂದಿದ್ದು, ಆಮ್ ಆದ್ಮಿ ಪಾರ್ಟಿ ರಾಷ್ಟ್ರೀಯ ರಾಜಕೀಯ ಪಾರ್ಟಿ ಆಗುತ್ತಿರುವುದು ಅತೀವ ಸಂತಸ ತಂದಿದೆ ಎಂದು ಚುನಾವಣಾ ಫಲಿತಾಂಶದ ಬಗ್ಗೆ ಪ್ರತಿಕ್ರಿಯೆ ನೀಡಿರುವ ಆಮ್ ಆದ್ಮಿ ಪಾರ್ಟಿ ದಕ್ಷಿಣ ಕನ್ನಡ ಜಿಲ್ಲಾ ಅಧ್ಯಕ್ಷ, ಮಂಗಳೂರು ನಗರ ದಕ್ಷಿಣ ವಿಧಾನಸಭಾ ಕ್ಷೇತ್ರದ ಅಭ್ಯರ್ಥಿ ಕೆ. ಸಂತೋಷ ಕಾಮತ್ ಹೇಳಿದ್ದಾರೆ.

ಗುಜರಾತ್ ರಾಜ್ಯದ ವಿಧಾನಸಭಾ ಚುನಾವಣೆಯಲ್ಲಿ ನಿರೀಕ್ಷಿತ ಪ್ರಮಾಣದ ಸೀಟುಗಳನ್ನು ಗೆಲ್ಲಲು ಸಾಧ್ಯ ಆಗದಿದದ್ದರು ಕೂಡ ರಾಜ್ಯದಲ್ಲಿ ಶೇಕಡ 13ರಷ್ಟು ಮತಗಳನ್ನು ಪಡೆದುಕೊಂಡಿದ್ದೇವೆ. ಆಮ್ ಆದ್ಮಿ ಪಾರ್ಟಿ ಈಗಾಗಲೇ ದೆಹಲಿ, ಪಜಾಬ್ ಮತ್ತು ಗೋವಾ ರಾಜ್ಯಗಳಲ್ಲಿ ರಾಜ್ಯಗಳ ರಾಜಕೀಯ ಪಕ್ಷವೆಂದು ಚುನಾವಣಾ ಆಯೋಗದಿಂದ ಮಾನ್ಯತೆ ಪಡೆದುಕೊಂಡಿದೆ.

ಇದೀಗ ಗುಜರಾತ್ ರಾಜ್ಯದಲ್ಲಿ ಕೂಡ ಮಾನ್ಯತೆ ದೊರೆಯಲಿದೆ. ನಾಲ್ಕು(4) ರಾಜ್ಯಗಳಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿ ಮನ್ನಣೆ ಪಡೆಯುವ ಪಕ್ಷವನ್ನು ರಾಷ್ಟ್ರೀಯ ರಾಜಕೀಯ ಪಕ್ಷ ಎಂದು ಭಾರತ ಚುನಾವಣಾ ಆಯೋಗ ಪರಿಗಣಿಸುತ್ತದೆ. ಈ ನಿಟ್ಟಿನಲ್ಲಿ ಚುನಾವಣಾ ಆಯೋಗದ ಧಿಕೃತ ಪ್ರಕಟಣೆ ಹೊರಡಿಸಬೇಕಾಗಿದೆ ಎಂದು ಸಂತೋಷ್ ಕಾಮತ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

ದೆಹಲಿ, ಪಂಜಾಬ್ ರಾಜ್ಯಗಳಲ್ಲಿ ಅಮ್ ಅದ್ಮಿ ಪಾರ್ಟಿ ಈಗಾಗಲೇ ಸರಕಾರ ರಚಿಸಿದೆ.ಗೋವಾ ರಾಜ್ಯದಲ್ಲಿ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿದೆ.

ಯಾವುದೇ ರಾಜಕೀಯ ಪಕ್ಷವು ರಾಜ್ಯದಲ್ಲಿ ರಾಜ್ಯ ಪಕ್ಷವಾಗಿ ಗುರುತಿಸಿಕೊಳ್ಳಲು ಅರ್ಹತೆ ಹೊಂದಲು, ಅದು ಐದು ಷರತ್ತುಗಳಲ್ಲಿ ಯಾವುದನ್ನಾದರೂ ಒಂದನ್ನು ಪೂರೈಸಿರಬೇಕು.

ರಾಜ್ಯದ ಮಾನ್ಯತೆ ಪಡೆದ ರಾಜಕೀಯ ಪಕ್ಷವಾಗಿ ಗುರುತಿಸಿಕೊಳ್ಳಲು ಷರತ್ತುಗಳು

1) ಮತದ ಕನಿಷ್ಠ 6% ರಷ್ಟು ಪಡೆದಿರಬೇಕು ಮತ್ತು ಅಸೆಂಬ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ 2 ಸ್ಥಾನಗಳನ್ನು ಗೆಲ್ಲಬೇಕು.

2) ಕನಿಷ್ಠ 6% ಮತವನ್ನು ಪಡೆಯಬೇಕು ಮತ್ತು ಲೋಕಸಭೆ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ 1 ಸ್ಥಾನವನ್ನು ಗೆಲ್ಲಬೇಕು.

3) ಅಸೆಂಬ್ಲಿ ಸಾರ್ವತ್ರಿಕ ಚುನಾವಣೆಯಲ್ಲಿ ಕನಿಷ್ಠ 3% ಸ್ಥಾನಗಳನ್ನು ಅಥವಾ ಕನಿಷ್ಠ 3 ಸ್ಥಾನಗಳನ್ನು ಗೆದ್ದಿರಬೇಕು.

4) ಲೋಕಸಭಾ ಸಾರ್ವತ್ರಿಕ ಚುನಾವಣೆಯಲ್ಲಿ ಒಂದು ರಾಜ್ಯದಿಂದ ಪ್ರತಿ 25 ಸ್ಥಾನಗಳಲ್ಲಿ ಕನಿಷ್ಠ 1 ಸ್ಥಾನವನ್ನು ಗೆಲ್ಲಬೇಕು.

ಪ್ರಯೋಜನಗಳು-

ಮೊದಲನೇಯದಾಗಿ ರಾಷ್ಟ್ರೀಯ ಅಥವಾ ರಾಜ್ಯ ಪಕ್ಷವಾಗಿ ಗುರುತಿಸಿಕೊಳ್ಳುವುದರಿಂದ ಆ ಪಕ್ಷದ ಚುನಾವಣಾ ಚಿಹ್ನೆಯನ್ನು ಭಾರತದಾದ್ಯಂತ ಯಾವುದೇ ಇತರ ರಾಜಕೀಯ ಪಕ್ಷವು ಚುನಾವಣೆಗಳಲ್ಲಿ ಬಳಸಲಾಗುವುದಿಲ್ಲ ಎಂದು ಖಚಿತಪಡಿಸುತ್ತದೆ.

ಮಾನ್ಯತೆ ಪಡೆದ ‘ರಾಜ್ಯ’ ಮತ್ತು ‘ರಾಷ್ಟ್ರೀಯ’ ಪಕ್ಷಕ್ಕೆ ನಾಮನಿರ್ದೇಶನವನ್ನು ಸಲ್ಲಿಸಲು ಕೇವಲ ಒಬ್ಬ ಸೂಚಕನ ಅಗತ್ಯವಿದೆ.

ಮಾನ್ಯತೆ ಪಡೆದ ‘ರಾಜ್ಯ’ ಮತ್ತು ರಾಷ್ಟ್ರೀಯ ಪಕ್ಷಗಳಿಗೆ ಚುನಾವಣಾ ಆಯೋಗವು ಎರಡು ಸೆಟ್ ಮತದಾರರ ಪಟ್ಟಿಗಳನ್ನು ಉಚಿತವಾಗಿ ನೀಡಲಾಗುತ್ತದೆ. ಇದರ ಜೊತೆಗೆ ರಾಷ್ಟ್ರೀಯ ಅಥವಾ ರಾಜ್ಯ ಪಕ್ಷದ ಟಿಕೆಟ್‌ನಲ್ಲಿ ಸ್ಪರ್ಧಿಸುವ ಅಭ್ಯರ್ಥಿಗಳು ಸಾರ್ವತ್ರಿಕ ಚುನಾವಣೆಯ ಸಮಯದಲ್ಲಿ ಮತದಾರರ ಪಟ್ಟಿಯ ಪ್ರತಿಯನ್ನು ಉಚಿತವಾಗಿ ಪಡೆಯುತ್ತಾರೆ.

ರಾಷ್ಟ್ರೀಯ ಪಕ್ಷಗಳು 40 ಸ್ಟಾರ್ ಪ್ರಚಾರಕರನ್ನು ಹೊಂದಬಹುದು ಮತ್ತು ಇತರರು 20 ಸ್ಟಾರ್ ಪ್ರಚಾರಕರನ್ನು ಹೊಂದಬಹುದು. ಪಕ್ಷದ ಅಭ್ಯರ್ಥಿಗಳ ಚುನಾವಣಾ ವೆಚ್ಚದಲ್ಲಿ ಸ್ಟಾರ್ ಪ್ರಚಾರಕರ ಪ್ರಯಾಣ ಮತ್ತು ಇತರ ವೆಚ್ಚಗಳನ್ನು ಸೇರಿಸಲಾಗುವುದಿಲ್ಲ.


Join The Telegram Join The WhatsApp
Admin
the authorAdmin

Leave a Reply