ಕಾರವಾರ : ರಾಷ್ಟ್ರೀಯ ತನಿಖಾ ದಳ ಅಧಿಕಾರಿಗಳು ಇಂದು (ಜೂ.18) ಬೆಳ್ಳಂ ಬೆಳಗ್ಗೆ ಶಿರಸಿ ತಾಲೂಕಿನ ಬನವಾಸಿಯಲ್ಲಿನ ಓರ್ವ ಮನೆ ಮೇಲೆ ದಾಳಿ ಮಾಡಿದೆ. ದಾಳಿಯಲ್ಲಿ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹೊಂದಿರುವ ಆರೋಪದ ಮೇಲೆ ಅಬ್ದುಲ್ ಸುಕ್ಕೂರ್ ನನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅಬ್ದುಲ್ ಸುಕ್ಕೂರ್ ಬನವಾಸಿಯ ದಾಸನಕೊಪ್ಪದಲ್ಲಿರುವ ನಿವಾಸಿಯಾಗಿದ್ದಾರೆ. ಅಬ್ದುಲ್ ಸುಕ್ಕೂರ್ ದುಬೈನಲ್ಲಿ ಕೆಲಸ ಮಾಡುತ್ತಿದ್ದು ಬಕ್ರೀದ್ ಹಬ್ಬ ಹಿನ್ನೆಲೆಯಲ್ಲಿ ಗ್ರಾಮಕ್ಕೆ ಆಗಮಿಸಿದ್ದ.

ಅಬ್ದುಲ್ ಸುಕ್ಕೂರ್ ಆನ್‌ಲೈನ್ ಮೂಲಕ ಭಯೋತ್ಪಾದಕ ಸಂಘಟನೆ ಜೊತೆ ಸಂಪರ್ಕ ಹಾಗೂ ಪಾಸ್‌ ಪೋರ್ಟ್‌ಗೆ ನಕಲಿ ದಾಖಲೆಗಳನ್ನು ನೀಡಿದ ಬಗ್ಗೆ ಎನ್‌ಐಎ ಮಾಹಿತಿ ಪಡೆದುಕೊಂಡಿದೆ. ಅಬ್ದುಲ್ ಸುಕ್ಕೂರ್ ಭಾರತಕ್ಕೆ ಮರಳಿದ್ದು, ಸ್ವಗ್ರಾಮಕ್ಕೆ ಬಂದಿದ್ದ ವಿಚಾರವನ್ನು ತಿಳಿದು ಐವರು ಎನ್‌ಐಎ ಅಧಿಕಾರಿಗಳು ಸ್ಥಳೀಯ ಪೊಲೀಸರ ಸಹಕಾರದೊಂದಿಗೆ ದಾಳಿ ಮಾಡಿದ್ದಾರೆ.