ಬೆಳಗಾವಿ: ಕರುನಾಡ ಚಕ್ರವರ್ತಿ ಡಾ. ಶಿವರಾಜ್ ಕುಮಾರ್ ಸವದತ್ತಿ ಯಲ್ಲಮ್ಮ ದೇವಸ್ಥಾನಕ್ಕೆ ಭೇಟಿ ನೀಡಿದರು. ಬೆಳಗಾವಿಯಲ್ಲಿ “ಉತ್ತರಕಾಂಡ” ಚಿತ್ರದ ಚಿತ್ರೀಕರಣವನ್ನು ಮುಗಿಸಿಕೊಂಡು ದೇವಿಯ ದರ್ಶನ ಪಡೆದ ಶಿವಣ್ಣನಿಗೆ ಈ ಕ್ಷೇತ್ರ ಅದೃಷ್ಟವಂತೆ. ಹಿಂದೆ ಶ್ರೀರಾಮ್, ಮೈಲಾರಿ ಮುಂತಾದ ಬ್ಲಾಕ್ ಬಸ್ಟರ್ ಚಿತ್ರಗಳ ಪಾಲಿಗೂ ಸವದತ್ತಿ ಯಲ್ಲಮ್ಮ ಅದೃಷ್ಟ ದೇವತೆ. ಹಾಗಾಗಿ ಉತ್ತರಕಾಂಡ‌ದ ಚಿತ್ರೀಕರಣದ ನಂತರ ಶಿವಣ್ಣ ತಾಯಿ‌ ಆಶೀರ್ವಾದವನ್ನು ಪಡೆದಿದ್ದಾರೆ.
ಕೆ.ಆರ್.ಜಿ. ಸ್ಟುಡಿಯೋಸ್ ಬ್ಯಾನರ್ ಅಡಿಯಲ್ಲಿ ಕಾರ್ತಿಕ್ ಗೌಡ ಮತ್ತು ಯೋಗಿ ಜಿ ರಾಜ್ ನಿರ್ಮಿಸಿರುವ “ಉತ್ತರಕಾಂಡ” ರೋಹಿತ್ ಪದಕಿ ನಿರ್ದೇಶನದ ಬಹು ನಿರೀಕ್ಷಿತ ಆಕ್ಷನ್ ಡ್ರಾಮಾ ಚಿತ್ರವಾಗಿದೆ.