ಬೆಳಗಾವಿ : ಕಲಾಶಕ್ತಿ ಬಹುದೊಡ್ಡದು. ಅದು ನಮ್ಮೊಳಗೆ ಮನೆಮಾಡಿಕೊಂಡಿರುತ್ತದೆ. ಅಂತಹ ಪ್ರತಿಭೆಯನ್ನು ಹೊರಚಿಮ್ಮುವ ಅವಕಾಶಗಳನ್ನು ಪಡೆದು ಜೀವನ ರೂಪಿಸಿಕೊಳ್ಳುವಂತಾಗಬೇಕು. ನಾವಾರೆಂದು ತಿಳಿದುಕೊಳ್ಳುವ ಮೂಲಕ ನಮ್ಮೊಳಗಿನ ಅಭಿವ್ಯಕ್ತಿಯನ್ನು ಮೊದಲು ನಾವೇ ಗುರುತಿಸಿಕೊಳ್ಳುವ ಕ್ರಿಯೆ ನಮ್ಮಿಂದಾಗಬೇಕೆAದು ಯುವ ಅಭಿನೇತ್ರಿ ‘ಇಬ್ಬನಿ ತಬ್ಬಿದ ಇಳೆಯಲಿ’ ಚಲನಚಿತ್ರದ ನಟಿ ಅಂಕಿತಾ ಅಮರ ಹೇಳಿದರು.

ಅವರು ಲಿಂಗರಾಜ ಬಿಬಿಎ ಮಹಾವಿದ್ಯಾಲಯವು ಪದವಿಪೂರ್ವ ವಿದ್ಯಾರ್ಥಿಗಳಿಗೆ ಆಯೋಜಿಸಿದ ಎರಡು ದಿನಗಳ ಅಂತರ್ ಕಾಲೇಜು ‘ವೃತ್ತಾಂತ’ಯುವಜನೋತ್ಸವವನ್ನು ಬೆಳಗಾವಿಯ ಜೆಎನ್‌ಎಂಸಿ ಜೀರಗೆ ಸಭಾಗೃಹದಲ್ಲಿ ಉದ್ಘಾಟಿಸಿ ಮಾತನಾಡಿದರು.
ಜೀವನದಲ್ಲಿ ಮೊದಲು ನಮ್ಮನ್ನು ನಾವು ತಿಳಿದುಕೊಳ್ಳಬೇಕು. ನಮ್ಮ ಗುರಿಗಳನ್ನು ನಿರ್ಧರಿಸಿಕೊಳ್ಳಬೇಕು. ಜೀವನವೆನ್ನುವುದು ಒಂದು ಸುಂದರವಾದ ತಪಸ್ಸು. ಅನೇಕ ಸವಾಲುಗಳಿಂದ ಕೂಡಿದ ಈ ಜೀವನವನ್ನು ಪ್ರೀತಿಯಿಂದ ಸ್ವೀಕರಿಸಬೇಕು. ಅಂದಾಗ ಏನಾದರೂ ನಾವು ಸಾಧಿಸಲು ಸಾಧ್ಯ. ಎಲ್ಲಕ್ಕೂ ಮುಖ್ಯವಾಗಿ ನಮಗೆ ಬದುಕನ್ನು ನೀಡಿದ ತಂದೆ-ತಾಯಿಯ ಋಣವನ್ನು ಮರೆಯಬಾರದು. ಅವರಿಂದಲೇ ನಮ್ಮ ಬದುಕು ಅರಳಿದಂತಹದೆಂಬ ಭಾವ ನಮ್ಮೊಳಗಿರಬೇಕು. ನಮಗೆ ಪಾಠ ಮಾಡಿದ ಶಿಕ್ಷಕರನ್ನೂ ಮರೆಯಬಾರದು, ಅವರ ಮಾರ್ಗದರ್ಶನ ಹಾಗೂ ಬೋಧನೆ ನಮ್ಮ ಬದುಕಿನುದ್ದಕ್ಕೂ ಆಶ್ರಯವಾಗಿರುತ್ತದೆ. ಅವಕಾಶಗಳು ನಮ್ಮನ್ನು ಹುಡುಕಿಕೊಂಡು ಬರುವುದಿಲ್ಲ, ನಾವು ಅಂತಹ ಅವಕಾಶಗಳನ್ನು ಬೆನ್ನಟ್ಟಬೇಕು. ನಮ್ಮೊಳಗಿನ ಪ್ರತಿಭೆಗೆ ಒಂದು ವೇದಿಕೆಯನ್ನು ನಾವೇ ಸಿದ್ಧ ಪಡಿಸಿಕೊಳ್ಳಬೇಕು. ಇಂದು ಅವಕಾಶಗಳ ಮಹಾಪೂರವೇ ನಮ್ಮ ಮುಂದಿದೆ. ನಮ್ಮೊಳಗಿನ ಕೀಳರಿಮೆಯನ್ನು ತೊರೆದು ಹೊಸ ಹೊಸ ಅನ್ವೇಷಣೆ, ಸಾಧನೆಯೆಡೆಗೆ ಹೆಜ್ಜೆಇಡುವುದು ಬಹುಮುಖ್ಯ. ಎಲ್ಲಕ್ಕೂ ಮುಖ್ಯವಾಗಿ ನಮ್ಮ ಭಾಷೆ ಹಾಗೂ ಸಂಸ್ಕೃತಿಯನ್ನು ಅಪ್ಪಿಕೊಳ್ಳುವ ಮನಸ್ಥಿತಿಯನ್ನು ಮೂಡಿಸಿಕೊಳ್ಳುವುದು ಅಷ್ಟೇ ಮುಖ್ಯ. ನಾವೇ ಅದನ್ನು ಪ್ರೀತಿಸದೇ ಹೋದರೆ ಮತ್ತಾರು ಪ್ರೀತಿಸಲು ಸಾಧ್ಯ. ಇದೆಲ್ಲದರೊಂದಿಗೆ ನಮ್ಮ ಪಾಠ ಪ್ರವಚನದೆಡೆಗೂ ಹೆಚ್ಚಿನ ಆದ್ಯತೆ ನೀಡುವುದು ಅವಶ್ಯವಾಗಿದೆ. ಬದುಕಿಗೆ ಓದು ಮುಖ್ಯ. ಅದನ್ನು ವಿದ್ಯಾರ್ಥಿ ದೆಸೆಯಲ್ಲಿಯೇ ಪಡೆದುಕೊಳ್ಳಬೇಕು. ಓದಿನೆಡೆಗೆ ಗಮನಹರಿಸುವ ಮೂಲಕ ನಮ್ಮ ಮಾನಸಿಕ ಹಾಗೂ ವ್ಯಕ್ತಿತ್ವ ವಿಕಸನಕ್ಕೆ ಪ್ರಯತ್ನಿಸಬೇಕು. ಪಠ್ಯ ಹಾಗೂ ಪಠ್ಯತೇರ ಎರಡು ಚಟುವಟಿಕೆಗಳು ನಮ್ಮನ್ನು ವಿಭಿನ್ನವಾಗಿ ರೂಪಿಸುತ್ತವೆ. ಆ ನಿಟ್ಟಿನಲ್ಲಿ ಮನಸ್ಸನ್ನು ಹದಗೊಳಿಸಿಕೊಳ್ಳುಬೇಕು. ಎಲ್ಲವನ್ನು ತಿಳಿದುಕೊಳ್ಳುವ ಹಾಗೂ ಅಭಿರುಚಿ ಹೊಂದುವ ಮನಸ್ಸು ಮಾತ್ರ ಕ್ರಿಯಾಶೀಲವಾಗಿರುತ್ತದೆ. ನಮ್ಮ ಕ್ರಿಯಾಶೀಲ ಬದುಕಿಗೆ ಒಂದಿಲ್ಲೊಂದು ಕಲೆಯಲ್ಲಿ ತೊಡಗಿಸಿಕೊಳ್ಳುವುದು ಬಹು ಅಗತ್ಯವೆನಿಸಿದೆ. ವ್ಯಾಪಾರ ವಾಣಿಜ್ಯ ಏನೇ ಇರಲಿ ಅದರ ಆಯಾಮಗಳನ್ನು ಅರಿತುಕೊಳ್ಳುವ ಕೌಶಲತೆಯನ್ನು ಮೈಗೂಡಿಸಿಕೊಂಡರೆ ಜೀವನ ಅದ್ಭುತವಾಗಿರುತ್ತದೆ. ಜೀವನಾನುಭವವನ್ನು ಕಟ್ಟಿಕೊಡುವ ಒಳ್ಳೆಯದನ್ನು ನಾವೆಲ್ಲರೂ ಅಪ್ಪಿಕೊಳ್ಳೋಣವೆಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.

ಹುಬ್ಬಳ್ಳಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಮಹಾಲಿಂಗಪುರ, ರಬಕವಿ, ಜಮಖಂಡಿ, ಚಿಕ್ಕೋಡಿ, ನಿಪ್ಪಾಣಿ, ಖಾನಾಪುರ ಮೊದಲ್ಗೊಂಡು ಉತ್ತರ ಕರ್ನಾಟಕದ ವಿವಿಧ ಪದವಿಪೂರ್ವ ಮಹಾವಿದ್ಯಾಲಯಗಳ ೨೦೦೦ಕ್ಕೂ ಹೆಚ್ಚು ವಿದ್ಯಾರ್ಥಿಗಳು ಈ ಯುವ ಜನೋತ್ಸವದಲ್ಲಿ ಪಾಲ್ಗೊಂಡಿದ್ದರು. ಯುವಜನೋತ್ಸವದಲ್ಲಿ ಅಂಗವಾಗಿ ಚರ್ಚಾಸ್ಪರ್ಧೆ, ರಸಪ್ರಶ್ನೆ, ಕಾವ್ಯ ರಚನೆ, ಕಥಾವಾಚನ, ಕಾಮಿಡಿ, ಅಡುಗೆ ಸ್ಪರ್ಧೆ, ನೃತ್ಯ, ಫ್ಯಾಶನ್ ಷೋ, ಹಾಡು ಹೀಗೆ ೪೦ಕ್ಕೂ ವಿವಿಧ ಲಲಿತಕಲೆಗಳ ಸ್ಪರ್ಧೆಯನ್ನು ವಿದ್ಯಾರ್ಥಿಗಳಿಗೆ ಆಯೋಜಿಸಲಾಗಿತ್ತು.
ಸಮಾರಂಭದ ಅಧ್ಯಕ್ಷತೆಯನ್ನು ಬಿಬಿಎ ಮಹಾವಿದ್ಯಾಲಯದ ಪ್ರಾಚಾರ್ಯರು ಹಾಗೂ ಕೆಎಲ್‌ಇ ಸಂಸ್ಥೆಯ ಜಂಟಿ ಕಾರ್ಯದರ್ಶಿ ಡಾ.ಪ್ರಕಾಶ ಕಡಕೋಳ ವಹಿಸಿದ್ದರು. ಐಕ್ಯೂಎಸ್‌ಸಿ ಸಂಯೋಜಕಿ ಪ್ರೊ.ವಿಭಾ ಹೆಗಡೆ ಉಪಸ್ಥಿತರಿದ್ದರು.

 


Youth Festival “ Vrittant” organized by KLE’s College of Business Administration(BBA) Lingaraj College Campus, Belagavi

Belagavi 29th Nov, 2024:

KLE Society’s College of Business Administration (BBA) Lingaraj College Campus, Belagavi organised ” Vrittant” a two- day State level Youth Festival from 29th November, 2024 to 30th November, 2024.

It was inaugurated by Kannada Film actress Ankita Amar on 29th November 2024 at JNMC JIRGE Hall and said, “Nobody is superior and Nobody is Inferior in this world. Everybody is unique. We need to introspect ourselves; nobody will give us opportunity. It is necessary to know one’s strength and have to create opportunities for ourselves.” Furthermore, she said Success is within us. What we think we become. We need to fix our goal and have to travel in that direction. Many challenges will occur in life. We must be prepared to face it instead of choosing the easy way. During college days each student must enjoy the learning different skills. Only skilled mind and body will have opportunities. After graduation it doesn’t mean that learning ends. Studying is not learning merely the prescribed textbooks.

Study is also important with co-curricular activities. If one can balance both then the mind becomes matured. Through matured mind man becomes more creative.”

More than 2000 students from various PU colleges of Hubli, Dharwad, Vijaypur, Jamakhandi, Chikodi, Nippani, Khanapur, Mahalingpur had participated in 40 and more various competitions like Debate, Cooking Competition, Dance, Fashion show, Poetry Recitation, Stand-Up Comedy, Singing, Quiz etc.

 

“Vrittant” The Youth Festival was presided over by Dr Prakash Kadakol , Joint Secretary, and KLE’s College of Business Administration(BBA) Lingaraj College Campus, Belagavi. Dr Vibha Hedge, IQAC Coordinator was also present during the Youth Festival