ಬೆಲ್ಲದ ಕಾನೂನು ಕಾಲೇಜಿನಲ್ಲಿ ‘ಅಧಿನಿಯಮ್ ದರ್ಶನ್’ ಕಾನೂನು ಪ್ರದರ್ಶನ ಬುಧವಾರ
ಬೆಳಗಾವಿ :
ನಗರದ ಲಿಂಗರಾಜ ಕಾಲೇಜಿನ ಆವರಣದಲ್ಲಿರುವ ಕೆ.ಎಲ್.ಇ. ಸಂಸ್ಥೆಯ ಬಿ.ವಿ.ಬೆಲ್ಲದ ಕಾನೂನು ಮಹಾವಿದ್ಯಾಲಯ ಫೆಬ್ರವರಿ 21 ರಂದು ಬುಧವಾರ ಬೆಳಿಗ್ಗೆ 10 ರಿಂದ ಸಂಜೆ 4 ರವರೆಗೆ ಬೆಲ್ಲದ ಕಾನೂನು ಕಾಲೇಜಿನ ಸೆಮಿನಾರ್ ಹಾಲ್ನಲ್ಲಿ “ಅಧಿನಿಯಮ ದರ್ಶನ್ – ನ್ಯಾಯ ಅನಾವರಣ: ಕಾನೂನು ಪರಿಶೋಧನೆ” ಕಾನೂನು ಪ್ರದರ್ಶನವನ್ನು ಆಯೋಜಿಸಿದೆ.
ಕಾನೂನು ಪ್ರದರ್ಶನವನ್ನು ಹಿರಿಯ ನ್ಯಾಯವಾದಿ ಎಸ್.ಬಿ.ಶೇಖ್ ಉದ್ಘಾಟಿಸಲಿದ್ದಾರೆ. ಸಮಾರಂಭದ ಅಧ್ಯಕ್ಷತೆಯನ್ನು ಕಾಲೇಜಿನ ಸ್ಥಾನಿಕ ಆಡಳಿತ ಮಂಡಳಿಯ ಅಧ್ಯಕ್ಷ ಆರ್.ಬಿ.ಬೆಲ್ಲದ ವಹಿಸಲಿದ್ದಾರೆ.
ಪ್ರದರ್ಶನದ ಸಂದರ್ಭದಲ್ಲಿ ಭಾರತೀಯ ಸುಪ್ರೀಂ ಕೋರ್ಟ್ ಸೇರಿದಂತೆ ವಿವಿಧ ನ್ಯಾಯಾಲಯಗಳ ಮಾದರಿಗಳ ಪ್ರದರ್ಶನ ಸೇರಿದಂತೆ ಜಾಗೃತಿ ಮೂಡಿಸಲು ಐತಿಹಾಸಿಕ ಪ್ರಕರಣಗಳು, ಸಂಗತಿಗಳು, ಕಾನೂನು ಸಾಮಗ್ರಿಗಳನ್ನು ಪ್ರದರ್ಶಿಸಲಾಗುತ್ತಿದೆ. ಪ್ರಾಚಾರ್ಯ ಡಾ.ಬಿ.ಜಯಸಿಂಹ ಅವರ ಮಾರ್ಗದರ್ಶನದಲ್ಲಿ ಜರುಗುತ್ತಿರುವ ಈ ಪ್ರದರ್ಶನದ ಕಾರ್ಯಕ್ರಮವನ್ನು ಸಹಾಯಕ ಪ್ರಾಧ್ಯಾಪಕಿ ರಾಜಶ್ರೀ ಪಾಟೀಲ ಸಂಯೋಜಿಸಿದ್ದಾರೆ. ಸಾರ್ವಜನಿಕರು ಹಾಗೂ ಬೆಳಗಾವಿ ನಗರದ ವಿವಿಧ ಕಾಲೇಜುಗಳ ವಿದ್ಯಾರ್ಥಿಗಳು ಕಾನೂನು ಪ್ರದರ್ಶನಕ್ಕೆ ಭೇಟಿ ನೀಡಿ ಈ ಪ್ರದರ್ಶನದ ಸದುಪಯೋಗ ಪಡೆಯಬೇಕೆಂದು ಪ್ರಕಟಣೆಯಲ್ಲಿ ಕೋರಲಾಗಿದೆ.