ಬೆಳಗಾವಿ:
ಆದಿನಾಥ ಚಂದ್ರನಾಥ ಉಪಾಧ್ಯೆ ಅವರು ಗಣಿತಶಾಸ್ತ್ರ ವಿಷಯದಲ್ಲಿ ‘ನ್ಯೂಮರಿಕಲ್ ಸ್ಟಡಿ ಆಫ್ ಸ್ಲೈಡರ್ ಆಂಡ್ ಸ್ಕ್ವೀಝ್ ಫಿಲ್ಮ್ ಬೇರಿಂಗ್ಸ್ ಲೂಬ್ರಿಕೇಟೆಡ್ ವಿಥ್ ನಾನ್- ನ್ಯೂಟೋನಿಯನ್ ಫ್ಲೂಯಿಡ್ಸ್’ ಎಂಬ ವಿಷಯದ ಕುರಿತು ಮಂಡಿಸಿದ ಸಂಶೋಧನಾ ಮಹಾ ಪ್ರಬಂಧಕ್ಕೆ ಗುಲಬರ್ಗಾ ವಿಶ್ವವಿದ್ಯಾಲಯ ಪಿಹೆಚ್‌ಡಿ ಪದವಿ ಪ್ರದಾನ ಮಾಡಿದೆ.

ಮೂಲತಃ ಇವರು ವಿಜಯಪುರ ಜಿಲ್ಲೆಯ ತಾಳಿಕೋಟಿಯವರು. ಪ್ರಸ್ತುತ ಇವರು ರಾಣಿ ಚನ್ನಮ್ಮ ವಿಶ್ವವಿದ್ಯಾಲಯದ ಸಂಗೊಳ್ಳಿ ರಾಯಣ್ಣ ಪ್ರಥಮ ದರ್ಜೆ ಘಟಕ ಮಹಾವಿದ್ಯಾಲಯದ ಗಣಿತಶಾಸ್ತ್ರ ವಿಭಾಗದಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. ಇವರಿಗೆ ಕಲಬುರ್ಗಿಯ ಜಿಲ್ಲೆಯ ಸೇಡಂನ ಸರಕಾರಿ ಪ್ರಥಮ ದರ್ಜೆ ಮಹಾವಿದ್ಯಾಲಯದ ಗಣಿತ ಶಾಸ್ತ್ರ ವಿಭಾಗದ ನಿವೃತ್ತ ಸಹ ಪ್ರಾಧ್ಯಾಪಕ ಡಾ. ಕಾಶಿನಾಥ ಬಿರಾದಾರ ಅವರು ಮಾರ್ಗದರ್ಶಕರಾಗಿದ್ದರು.