ಬೆಳಗಾವಿ : ಬೆಳಗಾವಿಯ ಪ್ರಸಿದ್ಧ ಆದಿತ್ಯ ಮಿಲ್ಕ್ ಮಾಲಿಕ ಶಿವಕಾಂತ ಸಿದ್ನಾಳ- 49 ಇಂದು ನಿಧನರಾಗಿದ್ದಾರೆ. ಮಾಜಿ ಸಂಸದ ದಿವಂಗತ ಎಸ್.ಬಿ.ಸಿದ್ನಾಳ ಅವರ ಪುತ್ರ ಹಾಗೂ ವಿ ಆರ್ ಎಲ್ ಸಮೂಹ ಸಂಸ್ಥೆಯ ಚೇರ್ಮನ್ ವಿಜಯ ಸಂಕೇಶ್ವರ ಅವರ ಅಳಿಯರಾಗಿರುವ ಶಿವಕಾಂತ ಸಿದ್ನಾಳ ಅನಾರೋಗ್ಯದಿಂದ ಬಳಲುತ್ತಿದ್ದರು. ಶನಿವಾರ ಮಧ್ಯಾಹ್ನ 1-30 ರ ಸುಮಾರಿಗೆ ಅವರು ತಮ್ಮ ಮನೆಯಲ್ಲಿ ನಿಧನರಾಗಿದ್ದಾರೆ . ಶಿವಕಾಂತ್ ಸಿದ್ನಾಳ್ ಅವರು 2004ರಲ್ಲಿ ವಿಜಯ ಸಂಕೇಶ್ವರ ಅವರ ಕನ್ನಡ ನಾಡು ಪಕ್ಷದಿಂದ ಕಿತ್ತೂರು ವಿಧಾನಸಭಾ ಮತಕ್ಷೇತ್ರದಿಂದ ಸ್ಪರ್ಧೆಗಿಳಿದು ಗಮನಸೆಳೆದಿದ್ದರು.

ಅವರಿಗೆ ಪತ್ನಿ, ಪುತ್ರ, ಪುತ್ರಿ ಇದ್ದಾರೆ. ವಿಜಯ ಸಂಕೇಶ್ವರ ಬೆಂಗಳೂರಿನಿಂದ ಆಗಮಿಸುತ್ತಿದ್ದು ಅವರು ಆಗಮಿಸಿದ ನಂತರ ಅಂತ್ಯಕ್ರಿಯೆ ಕುರಿತು ನಿರ್ಧರಿಸಲಾಗುವುದು ಎಂದು ಕುಟುಂಬದ ಮೂಲಗಳು ತಿಳಿಸಿವೆ.