ಬೆಳಗಾವಿ : ದೇಶದ ಮೊಟ್ಟ ಮೊದಲ ಅತ್ಯಾಧುನಿಕ ನ್ಯೂರೋ ಮೈಕ್ರೋಸ್ಕೋಪ್ ಯಂತ್ರೋಪಕರಣ ಕನೇರಿ ಮಠದ ಸಿದ್ಧಗಿರಿ ಆಸ್ಪತ್ರೆಯಲ್ಲಿ ಅಳವಡಿಸಲಾಗಿದೆ ಎಂದು ಕನೇರಿ ಮಠದ ಶ್ರೀ ಅದೃಶ್ಯ ಕಾಡಸಿದ್ದೇಶ್ವರ ಸ್ವಾಮೀಜಿ ತಿಳಿಸಿದರು.

ಗುರುವಾರ ಬೆಳಗಾವಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಕನೇರಿ ಮಠದ ಆಸ್ಪತ್ರೆಯಲ್ಲಿ ಹಳ್ಳಿಗಳಲ್ಲಿನ ಬಡ ಜನರಿಗೆ ಅನಕೂಲವಾಗುವ ನಿಟ್ಟಿನಲ್ಲಿ ಅವರ ಸೇವೆ ಮಾಡಲು ಅತ್ಯಾಧುನಿಕ ಯಂತ್ರೋಪಕರ ಖರೀದಿ ಮಾಡಲಾಗಿದೆ. ಬೇರೆ ಆಸ್ಪತ್ರೆಯಲ್ಲಿ ಈ ಯಂತ್ರದಿಂದ ಚಿಕಿತ್ಸೆ ‌ಮಾಡಿಸಿದರೆ 10 ರಿಂದ 15 ಲಕ್ಷ ರೂ. ವೆಚ್ಚವಾಗುತ್ತದೆ. ಆದರೆ ಕನೇರಿ ಮಠದ ಆಸ್ಪತ್ರೆಯಲ್ಲಿ ಕೇವಲ ಒಂದು ಲಕ್ಷ ರೂ. ವೆಚ್ಚವಾಗುತ್ತದೆ. ಕರ್ನಾಟಕ ಸರಕಾರ ಆರೋಗ್ಯ ಯೋಜನೆಯನ್ನು ಲಾಭವು ನಮ್ಮ ಆಸ್ಪತ್ರೆಯಲ್ಲಿ ಇವೆ. ಇದರ ಸದುಪಯೋಗ ಜನರು ಪಡೆಸಿಕೊಳ್ಳಬೇಕು ಎಂದರು. ”

ಈಗ ಅನುಸ್ಥಾಪನೆ ಆಗುತ್ತಿರುವ ದೇಶದ ಮೊಟ್ಟಮೊದಲ ಅತ್ಯಾಧುನಿಕ ರೂ.4.00 ಕೋಟಿ ಮೌಲ್ಯದ ನ್ಯೂರೋ ಮೈಕ್ರೋಸ್ಕೋಪ್ ಸಿದ್ಧಗಿರಿ ಮಠದ ಮಠಾಧಿಪತಿಗಳಾದ ಪರಮ ಪೂಜ್ಯ ಶ್ರೀ ಅದೃಶ್ಯ ಕಾಡಸಿದ್ಧೇಶ್ವರ ಸ್ವಾಮಿಜಿಯವರ “ಸಿದ್ಧಗಿರಿ ಆಸ್ಪತ್ರೆ ಮತ್ತು ರಿಸರ್ಚ ಸೇಂಟರ್”ನಲ್ಲಿ ಅನುಸ್ಥಾಪನೆಯಾಗುತ್ತಿರುವುದು ಜಗತ್ತಿನ ಜನರನ್ನು ಹುಬ್ಬೇರಿಸುವಂತೆ ಮಾಡಿದೆ ಎಂದರು.

ಸಿದ್ಧಗಿರಿ ನ್ಯೂರೋ ಸೈನ್ಸ್ ಸೆಂಟರ್ ಮತ್ತು ಸಂಶೋಧನಾ ಕೇಂದ್ರ ಕನೆರಿ ಮಠದ ಆಸ್ಪತ್ರೆಯಗಿದ್ದು ಅದೊಂದು ಚಾರಿಟೇಬಲ್ ಸಂಸ್ಥೆಯಾಗಿದ್ದು ಅದಕ್ಕೇ ಅತೀ ಕಡಿಮೆ ವೆಚ್ಚದಲ್ಲಿ ಎಲ್ಲ ಚಿಕಿತ್ಸೆ, ಶಸ್ತ್ರಕ್ರಿಯೆ ಆರೈಕೆಯನ್ನು “ಲಾಭ-ನಷ್ಟವಿಲ್ಲದೇ ನಡೆಸಿಕೊಂಡು ಹೋಗಲಾಗುತ್ತಿದೆ” ಎಂದು ನ್ಯೂರೊ ಸರ್ಜರಿ ವಿಭಾಗದ ಮುಖ್ಯಸ್ಥ ಡಾ. ಶಿವಶಂಕರ ಮರಜಕೆ ತಿಳಿಸಿದರು.

ಈ ಮೈಕ್ರೋಸ್ಕೋಪ್ ಮಿದುಳಿನ ಸೂಕ್ಷ್ಮ ನರಗಳ ಸಂಬಂಧಪಟ್ಟ ಕಾಯಿಲೆಗಳನ್ನು ಅತೀ ನಿಖರವಾಗಿ ಕಡಿಮೆ ಸಮಯದಲ್ಲಿ ಹಾಗೂ ಕಡಿಮೆ ರಕ್ತ ಸ್ರಾವದಲ್ಲಿ ಮಾಡಿ. ರೋಗಿಗಳಿಗೆ ಬೇಗ ಗುಣಮುಖವಾಗಲು ಹಾಗೂ ನಿಖರವಾದ ಫಲಿತಾಂಶ ನೀಡಲು ಸಹಾಯವಾಗುತ್ತದೆ. ದೇಶದ 10-15 ನರರೋಗ ಸಂಬಂಧಿಸಿದ ಆಸ್ಪತ್ರೆಗಳಲ್ಲಿ ಆಗುವಂತಹ ಮಿದುಳಿನ ಬೈಪಾಸ್ ಶಸ್ತ್ರ ಚಿಕಿತ್ಸೆ ಅಪಸ್ಮಾರಕ್ಕೆ ಹಾಗೂ ಮುಂತಾದ ಜಟಿಲ ಶಸ್ತ್ರ ಚಿಕಿತ್ಸೆಗಳಿಗೆ ಡಾ: ಶಿವಶಂಕರ ಮರಜಕೆ ಮತ್ತು ಅವರ ನೂರಿತ ತಜ್ಞರ ತಂಡ ಹೆಸರು ವಾಸಿಯಾಗಿದೆ ಎಂದರು.

ಮಿದುಳಿನ, ನರಗಳ ಗಡ್ಡೆ (ಟ್ಯೂಮರ್) ಮಿದುಳಿನ ಬೈಪಾಸ್ ಇಂತಹ ಶಸ್ತ್ರ ಚಿಕಿತ್ಸೆಗೆ ಈ ಮೈಕ್ರೋಸ್ಕೋಪದಿಂದ ಬಹಳಷ್ಟು ಸಹಾಯವಾಗಲಿದೆ ಎಂದರು.