This is the title of the web page
This is the title of the web page

Live Stream

September 2023
S M T W T F S
 12
3456789
10111213141516
17181920212223
24252627282930

| Latest Version 9.4.1 |

Sports News

36 ವರ್ಷಗಳ ನಂತರ ಚಿನ್ನಕ್ಕೆ ಮುತ್ತಿಟ್ಟ ಅರ್ಜೆಂಟೈನಾ ; ಕೊನೆಗೂ ವಿಶ್ವಕಪ್ ನೂತನ ಸಾಮ್ರಾಟ !

Join The Telegram Join The WhatsApp

ಕತಾರ್ :

ಇಡೀ ಜಗತ್ತಿನ ಕುತೂಹಲ ಕೆರಳಿಸಿದ್ದ ಫಿಫಾ ವಿಶ್ವ ಕಪ್ ಫುಟ್ಬಾಲ್ ಪಂದ್ಯಾವಳಿಯಲ್ಲಿ ಅರ್ಜೆಂಟೈನಾ ತಂಡ ಫ್ರಾನ್ಸ್ ತಂಡವನ್ನು ಸೋಲಿಸಿ ಪ್ರಶಸ್ತಿಯನ್ನು ತನ್ನದಾಗಿಸಿಕೊಂಡಿದೆ. ಈ ಮೂಲಕ ಮೂರನೇ ಬಾರಿಗೆ ಅರ್ಜೆಂಟೈನಾ ಪ್ರಾಬಲ್ಯ ಮೆರೆದಿದೆ.

ಮೊದಲಾರ್ಧದಲ್ಲೇ ಎರಡು ಎರಡು ಗೋಲ್ ಬಾರಿಸಿತು. ಮೆಸ್ಸಿ ಮತ್ತು ಮರಿಯ ಅವರು ತಲಾ ಒಂದೊಂದು ಗೋಲು ಬಾರಿಸಿದರು. ಹಾಲಿ ಚಾಂಪಿಯನ್ ಫ್ರಾನ್ಸ್ ಆರಂಭಿಕ ಹಂತದಲ್ಲಿ ಹಿನ್ನಡೆ ಸಾಧಿಸಿತು. ಆದರೆ ದ್ವಿತೀಯಾರ್ಧದಲ್ಲಿ ಫ್ರಾನ್ಸ್ ನ ಕೈಲಿಯನ್ ಎಂಬಪ್ಪೆ ಸತತ ಎರಡು ಗೋಲು ಬಾರಿಸಿದರು. ಇದರಿಂದಾಗಿ ಎರಡು ತಂಡಗಳು 2-2 ಸಮಬಲ ಸಾಧಿಸಿದವು.

ಹೆಚ್ಚುವರಿ ಸಮಯ ನೀಡಿದ್ದರು ಪಂದ್ಯ 3-3 ಅಂತರದಿಂದ ಡ್ರಾಗೊಂಡಿತು. ಹೀಗಾಗಿ ಪೆನಾಲಿಟಿ ಶೂಟ್ ಔಟ್ ನಲ್ಲಿ ಮೆಸ್ಸಿ 4-2 ಗೋಲು ದಾಖಲಿಸುವ ಮೂಲಕ ಚಾಂಪಿಯನ್ ಆಗಿ ತಮ್ಮ ತಂಡವನ್ನು ಗೆಲ್ಲಿಸಿದ್ದಾರೆ.

36 ವರ್ಷಗಳ ಬಳಿಕ ಚಿನ್ನದ ಟ್ರೋಫಿ:

ಅರ್ಜೆಂಟೀನಾ 36 ವರ್ಷಗಳ ನಂತರ ಚಿನ್ನದ ಟ್ರೋಫಿಗೆ ಮುತ್ತಿಕ್ಕಿದೆ. 1986 ರಲ್ಲಿ ಮೆಕ್ಸಿಕೋದಲ್ಲಿ ನಡೆದಿದ್ದ ಟೂರ್ನಿಯಲ್ಲಿ ಚಾಂಪಿಯನ್‌ಪಟ್ಟ ಗೆದ್ದ ನಂತರ ಅರ್ಜೆಂಟೀನಾ ಪ್ರಶಸ್ತಿ ಗೆದ್ದಿರಲಿಲ್ಲ. 1978 ರಲ್ಲಿ ನೆದರ್‌ಲ್ಯಾಂಡ್ ಸೋಲಿಸಿ ವಿಶ್ವಕಪ್ ಟ್ರೋಫಿಗೆ ಮುತ್ತಿಕ್ಕಿತ್ತು . ಆದರೆ 1990 ಮತ್ತು 2014 ರಲ್ಲಿ ರನ್ನರ್ ಅಪ್ ಸ್ಥಾನಕ್ಕಷ್ಟೇ ತೃಪ್ತಿಪಟ್ಟುಕೊಂಡಿತ್ತು . ಇದೀಗ 3 ನೇ ಕಿರೀಟದೊಂದಿಗೆ ಫುಟ್ಬಾಲ್ ಜಗತ್ತಿನ ದೊರೆಯಾಗಿ ವಿಜೃಂಭಿಸುತ್ತಿದೆ .


Join The Telegram Join The WhatsApp
Admin
the authorAdmin

Leave a Reply