ಬೆಳಗಾವಿ :
ಬೆಳಗಾವಿ ಅತ್ಯಂತ ದೊಡ್ಡ ಜಿಲ್ಲೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ 11 ಸ್ಥಾನಗಳನ್ನು ಕಾಂಗ್ರೆಸ್ ಪಕ್ಷ ಜಯಭೇರಿ ಬಾರಿಸಿತ್ತು. ಜಿಲ್ಲೆಯ ಗಾತ್ರಕ್ಕೆ ತಕ್ಕಂತೆ ಹೆಚ್ಚಿನ ಸಚಿವ ಸ್ಥಾನವನ್ನು ನೀಡಬೇಕಿತ್ತು. ಆದರೆ ಆ ಸಂದರ್ಭದಲ್ಲಿ ಅದನ್ನು ಮರೆಯಲಾಗಿತ್ತು. ಈಗ ನಿಗಮ ಮಂಡಳಿ ನೇಮಕದಲ್ಲೂ ಸಹ ಸರಕಾರ ಬೆಳಗಾವಿಗೆ ಮತ್ತೆ ಘೋರ ಅನ್ಯಾಯ ಮಾಡಿದೆ.

ಸಿದ್ದರಾಮಯ್ಯ ನೇತೃತ್ವದ ಕಾಂಗ್ರೆಸ್ ಸರಕಾರ 44 ಕಾಂಗ್ರೆಸ್ ಕಾರ್ಯಕರ್ತರಿಗೆ ನಿಗಮ ಮಂಡಳಿಯ ಅಧ್ಯಕ್ಷ ಹುದ್ದೆಯನ್ನು ಘೋಷಿಸಿದೆ. ಆದರೆ ಇದರಲ್ಲಿ ಬೆಳಗಾವಿಯ ಯಾವೊಬ್ಬ ಕಾಂಗ್ರೆಸ್ಸಿಗರ ಹೆಸರು ಸೇರಿಲ್ಲ. ಗಡಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ಸಹ ಬೆಳಗಾವಿ ಜಿಲ್ಲೆಯವರಿಗೆ ನೀಡಿಲ್ಲ ಈ ಹುದ್ದೆಯನ್ನು ಸೋಮಣ್ಣ ಬೇವಿನಮರದ ದಯಪಾಲಿಸಲಾಗಿದೆ. ಕನಿಷ್ಠ ಪಕ್ಷ ಗಡಿ ಪ್ರಾಧಿಕಾರದ ಅಧ್ಯಕ್ಷ ಹುದ್ದೆಯನ್ನು ಬೆಳಗಾವಿಗೆ ನೀಡಬೇಕಿತ್ತು. ಬೆಳಗಾವಿಯ ಕನ್ನಡ ಸಂಘಟನೆಗಳು ಈ ಬಗ್ಗೆ ಸದಾ ಒತ್ತಾಯ ಪಡಿಸುತ್ತಿರುವುದನ್ನು ಇಲ್ಲಿ ಗಮನಿಸಬಹುದು.