ಗೋಕಾಕ:
ಗ್ರಾಮೀಣ ಕೃಷಿ ಕಾರ್ಯಾನುಭವ ಕಾರ್ಯಕ್ರಮದಡಿಯಲ್ಲಿ ಶಿವಮೊಗ್ಗದ ಕೆಳದಿ ಶಿವಪ್ಪ ನಾಯಕ ಕೃಷಿ ಮತ್ತು ತೋಟಗಾರಿಕೆ ವಿಶ್ವವಿದ್ಯಾನಿಲಯದ ವಿದ್ಯಾರ್ಥಿಗಳಿಂದ ಅಜೋಲಾ ಸಸ್ಯದ ಕೃಷಿ ಪ್ರಾತ್ಯಕ್ಷಿಕೆ ಕಾರ್ಯಕ್ರಮವನ್ನು ಪ್ರಾಯೋಗಿಕವಾಗಿ ಕರಕುಚ್ಚಿ ಗ್ರಾಮದಲ್ಲಿ ಮಾಡಿದರು.
ವಿದ್ಯಾರ್ಥಿಗಳು ರೈತರಿಗೆ ಅಜೋಲಾ ಸಸ್ಯದ ಮಹತ್ವ ಹಾಗೂ ವಿವಿಧ ತಳಿಗಳು, ಬೆಳೆಯುವ ಹಂತಗಳು ಕುರಿತು ಮಾಹಿತಿಯನ್ನು ನೀಡಿದರು.
ಪಶುವಿನ ಉತ್ತಮ ಹಾಲಿನ ಇಳುವರಿಗಾಗಿ ಪಶುಗಳಿಗೆ ಹಾಕುವ ಹಿಂಡಿಯೊಂದಿಗೆ ಅಜೋಲಾ ಮಿಶ್ರಣ ಮಾಡಿ ಉಪಯೋಗಿಸಬೇಕು.ಅಜೋಲಾ ಬೆಳೆಯುವ ವಿಧಾನ ಹಾಗೂ ಉಪಯೋಗಿಸುವ ಕುರಿತು ಸಮಗ್ರ ಮಾಹಿತಿಯನ್ನು ರೈತರಿಗೆ ನೀಡಿದರು.
ಈ ಪ್ರಾತ್ಯಕ್ಷಿಕೆ ಕಾರ್ಯಕ್ರಮದಲ್ಲಿ ಶಿವಮೊಗ್ಗದ ಕೃಷಿ ಮಹಾವಿದ್ಯಾಲಯದ ವಿಸ್ತರಣ ವಿಭಾಗದ ಪ್ರಾಧ್ಯಾಪಕ ಡಾ: ಗಜೇಂದ್ರ ಟಿ.ಎಚ್. ಅವರು ಅಜೋಲಾದ ಪ್ರಾಮುಖ್ಯತೆಯ ಬಗ್ಗೆ 1.5 – 2 ಕೆಜಿ ಅಜೋಲ್ಲದಿಂದ ಶೇ.15 ರಿಂದ 20 ರಷ್ಟು ಹಾಲಿನ ಉತ್ಪಾದನೆ ಹೆಚ್ಚುತದೆ.ಎಮ್ಮೆಯ ಹಾಲಿನಲ್ಲಿ ಕೊಬ್ಬಿಣಾಂಶವು ಸಹ ಶೇ.0.3-0.7 ಹೆಚ್ಚಾಗುತ್ತದೆ.ಅಜೋಲಾ ಸತು ಮ್ಯಾಂಗನೀಸ್ ಮತ್ತು ಕಬ್ಬಿಣವನ್ನು ಕರಗಿಸುತ್ತದೆ.
ಅದಲ್ಲದೆ ಸಸ್ಯಗಳಿಗೂ ಲಭ್ಯವಾಗುವಂತೆ ಮಾಡುತ್ತದೆ .
ಇದನ್ನು ಹಸಿರು ಗೊಬ್ಬರವಾಗಿ ಉಪಯೋಗಿಸಬಹುದು.
ಅಜೋಲಾ ಹತ್ತಿರದ ಭತ್ತದ ಗದ್ದೆಗಳಲ್ಲಿ ಸೊಳ್ಳೆಗಳನ್ನು ತೆಗೆದುಹಾಕುತ್ತದೆ.
ಕೋಳಿ ಹಾಗೂ ಬಾತುಕೋಳಿಗಳ್ಳಲಿ ಆರೋಗ್ಯ ಸುಧಾರಿಸುತ್ತದೆ.
ಅಜೋಲಾವನ್ನು ಹಾಕಲು , ಎಮ್ಮೆ, ಆಡು,ಹಾಗೂ ಕುರಿಗಳಿಗೆ ಪೂರಕ ಆಹಾರವಾಗಿ ಉಪಯೋಗಿಸಬಹುದು ,
ಆದರೆ ಗರ್ಭಧರಿಸಿದ ಯಾವುದೇ ಪ್ರಾಣಿಗಳಿಗೆ ಕೊಡಬಾರದು ಎಂದು ತಿಳಿಸಿದರು. .ಡಾ: ಮಂಜುನಾಥ ಕುದರಿ ಅವರು ಅಜೋಲಾ ಬೆಳೆಯುವ ವಿಧಾನ ಕುರಿತು 10 ಅಡಿ ಉದ್ದ,5 ಅಡಿ ಅಗಲ ಹಾಗೂ 1 ಅಡಿ ಆಳದ ಗುಂಡಿ ತೊಡುವುದು ,ಗುಂಡಿಯಲ್ಲಿ ಸ್ವಲ್ಪ ಮರಳು ಹಾಕಿ ಹರಡುವುದು ತದನಂತರ ಅದರ ಮೇಲೆ ಪಾಲಿಥೀನ್ ಹಾಳೆ ಅಥವಾ ಇನ್ನಾವುದೇ ನೀರು ಬಸಿಯದೆ ಇರುವ ವಸ್ತುಗಳಿಂದ ಗುಂಡಿಯಲ್ಲಿ ಹಾಸಿ ನೀರು ಇಂಗದಂತೆ ತೊಟ್ಟಿಯಾಕರದಲ್ಲಿ ಹಾಕುವುದು,ಈ ರೀತಿ ಮಾಡಿದ ತೊಟ್ಟಿಯಲ್ಲಿ 10 ರಿಂದ 15 ಕೆ.ಜಿ ಮಣ್ಣು, 5 ಕೆ.ಜಿ ಸಗಣಿ ಮತ್ತು 30 ಗ್ರಾಂ ಸಿಂಗಲ್ ಸೂಪರ್ ಫಾಸ್ಫೇಟ್ ಗೊಬ್ಬರ ಹಾಕುವುದು,ತದನಂತರ ಅಜೋಲಾ ಸಸ್ಯಗಳನ್ನು ತೊಟ್ಟಿಗೆ ಬಿಡುವುದು.
ಒಂದು ವಾರದ ನಂತರ ಅಜೋಲಾ ಬೆಳೆದು ತೊಟ್ಟಿ ತುಂಬಾ ಹರಡುತ್ತದೆ, ನಂತರ ಪ್ರತಿ ವಾರಕೊಮ್ಮೆ 10 ಗ್ರಾಂ ಸಿಂಗಲ್ ಸೂಪರ್ ಫಾಸ್ಫೇಟ್ ಗೊಬ್ಬರ ಹಾಕುತ್ತಿರಬೇಕು ಎಂದು ಮಾಹಿತಿ ನೀಡುವ ಮೂಲಕ ಉಪಯೋಗಿಸುವ ವಿಧಾನ ಬಗ್ಗೆ ಪ್ರತಿದಿನ ಅಥವಾ 2 ದಿನಕ್ಕೊಮ್ಮೆ ತೊಟ್ಟಿಯಿಂದ ಜಾಳಿಗೆ ಮೂಲಕ ತೆಗೆಯಬೇಕು ಸ್ವಲ್ಪ ಅಜೊಲಾವನ್ನು ತೊಟ್ಟಿಯಲ್ಲಿ ಬಿಡಬೇಕು ತೊಟ್ಟಿಯಿಂದ ತೆಗೆದ ನಂತರ ಅಜೋಲವನ್ನು ಶುದ್ದನಿರಿನಿಂದ 2-3 ಬಾರಿ ಸ್ವಚ್ಚವಾಗಿ ತೊಳೆಯಬೇಕು ನಂತರ ಪಶುಗಳಿಗೆ ಕೊಡುವ ಹಿಂಡಿ ಅಥವಾ ಫೀಡ್ಸ್ ಜೊತೆ ಮಿಶ್ರಣ ಮಾಡಿ ಪಶುಗಳಿಗೆ ನೀಡುವುದು ಎಂದು ತಿಳಿಸಿದರು. ವಿದ್ಯಾರ್ಥಿಗಳು ಮತ್ತು ಗ್ರಾಮದ ರೈತರು ಪಾಲ್ಗೊಂಡಿದ್ದರು.