ಪುಣೆ : ಮಹಾರಾಷ್ಟ್ರ ಚುನಾವಣೆ ಈಗ ಕಾವೇರಿದೆ.
ಉಪಮುಖ್ಯಮಂತ್ರಿ ಅಜಿತ್ ಪವಾರ್ ವಿರುದ್ಧ ಈಗ ಯುಗೇಂದ್ರ ಪವಾರ್ ಅವರು ಶರದ್ ಪವಾರ್ ಅವರ ಎನ್ ಸಿಪಿಯಿಂದ ಕಣಕ್ಕಿಳಿದಿದ್ದಾರೆ. ಯುಗೇಂದ್ರ ಶರದ್ ಪವಾರ್ ಅವರ ಮೊಮ್ಮಗ. ಉಪಮುಖ್ಯಮಂತ್ರಿ ಅಜಿತ್ ಅವರ ಕಿರಿಯ ಸಹೋದರ ಶ್ರೀನಿವಾಸ್ ಪವಾರ್ ಅವರ ಅಪ್ತರೂ ಹೌದು.
ಬಾರಮತಿ ಕ್ಷೇತ್ರದಲ್ಲಿ ಯುಗೇಂದ್ರ ಪವಾರ್ ಸಕ್ರಿಯರಾಗಿದ್ದಾರೆ. ಈಗಾಗಲೇ ಸಾಕಷ್ಟು ಕೆಲಸ ಮಾಡಿದ್ದಾರೆ. ಕೆಲವು ತಿಂಗಳುಗಳಿಂದ ಸಾಮಾಜಿಕ ಕ್ಷೇತ್ರದಲ್ಲಿ ಗುರುತಿಸಿಕೊಂಡಿದ್ದಾರೆ. ಎನ್ ಸಿ ಪಿ ವಿಭಜನೆ ನಂತರ ಯುಗೇಂದ್ರ ಅಜ್ಜ ಶರದ್ ಪವಾರ್ ಅವರ ಜೊತೆ ಗುರುತಿಸಿಕೊಂಡಿದ್ದಾರೆ. ಬಾರಾಮತಿಯಲ್ಲಿ ಅಜಿತ್ ಪವಾರ್ ಹಾಗೂ ಯುಗೇಂದ್ರ ಪವಾರ್ ಅವರ ನಡುವೆ ಸ್ಪರ್ಧೆ ಇಡೀ ರಾಜ್ಯದ ಗಮನ ಸೆಳೆದಿದೆ.