ಚಂಡೀಗಢ: ಪಂಜಾಬ್‌ನ ಮಾಜಿ ಉಪಮುಖ್ಯಮಂತ್ರಿ ಸುಖಬೀರ್ ಸಿಂಗ್ ಬಾದಲ್ ಮತ್ತು ಅವರ ಸಹ ಮಂತ್ರಿಗಳು ದರ್ಬಾರ್ ಸಾಹಿಬ್‌ನ ಸ್ನಾನಗೃಹ ಮತ್ತು ಅಡುಗೆ ಕೋಣೆಯನ್ನು ಸ್ವಚ್ಛಗೊಳಿಸಲಿದ್ದಾರೆ ಮತ್ತು ಶ್ರೀ ಅಕಾಲ್ ತಖ್ತ್ ಅವರಿಗೆ ನೀಡಿದ ಧಾರ್ಮಿಕ ಶಿಕ್ಷೆಯ ಭಾಗವಾಗಿ ಈ ಅವರು ಈ ಕೆಲಸ ಮಾಡಲಿದ್ದು, ನಂತರ ಭಕ್ತರಿಗೆ ಲಂಗರ್ ಬಡಿಸುತ್ತಾರೆ.
ಶ್ರೀ ಅಕಲ್ ತಖ್ತ್ ಸಿಖ್ಖರ ಅತ್ಯುನ್ನತ ಮಂಡಳಿಯಾಗಿದೆ. 2015ರ ಗುರು ಗ್ರಂಥ ಸಾಹಿಬಕ್ಕೆ ಅಪಚಾರ ಎಸಗಿದ ಡೇರಾ ಸಚ್ಚಾ ಸೌದಾ ಮುಖ್ಯಸ್ಥ ಗುರ್ಮೀತ್ ರಾಮ ರಹೀಮ್ ಅವರನ್ನು ಬೆಂಬಲಿಸಿದ್ದಕ್ಕಾಗಿ ಅವರಿಗೆ ಶ್ರೀ ಅಕಾಲ್ ತಖ್ತ್ ಈ ಶಿಕ್ಷೆ ವಿಧಿಸಿದೆ.
ಸುಖಬೀರ್ ಸಿಂಗ್ ಬಾದಲ್ ತನ್ನ ತಪ್ಪುಗಳನ್ನು ಒಪ್ಪಿಕೊಂಡು ಅಕಾಲ್ ತಖ್ತ್‌ಗೆ ಬೇಷರತ್ ಕ್ಷಮೆಯಾಚಿಸಿದ ನಂತರ ಈ ಶಿಕ್ಷೆಯನ್ನು ನೀಡಲಾಯಿತು. ‘ಹೌದು’ ಅಥವಾ ‘ಇಲ್ಲ’ ಎಂದು ಪ್ರತಿಕ್ರಿಯಿಸುವಂತೆ ಸಿಖ್ ಮುಖಂಡರು ಸೂಚಿಸಿದ್ದರು. ಎಲ್ಲಾ ಪ್ರಶ್ನೆಗಳಿಗೆ ಸುಖಬೀರ್ ಬಾದಲ್ ‘ಹೌದು’ ಎಂದು ಪ್ರತಿಕ್ರಿಯಿಸಿದ್ದರು. ಗನ್ ಫೈರಿಂಗ್ ಘಟನೆ, ಅಪಚಾರ ಹಾಗೂ ಡೇರಾ ಮುಖ್ಯಸ್ಥರನ್ನುಬೆಂಬಲಿಸಿದ್ದು ಸೇರಿದಂತೆ ಅವರು ಎಲ್ಲ ತಪ್ಪುಗಳನ್ನು ಒಪ್ಪಿಕೊಂಡಿದ್ದಾರೆ.
ಕಾಲಿನ ಗಾಯದ ಕಾರಣ ಸುಖಬೀರ್ ಬಾದಲ್ ಅವರಿಗೆ ಶಿಕ್ಷೆಯಲ್ಲಿ ಸ್ವಲ್ಪ ಸಡಲಿತೆ ನೀಡಲಾಯಿತು. ಜೊತೆಗೆ, ಅವರ ತಂದೆ ಪ್ರಕಾಶ್ ಸಿಂಗ್ ಬಾದಲ್ ಅವರು ಮುಖ್ಯಮಂತ್ರಿಯಾಗಿದ್ದಾಗ ಅವರಿಗೆ ನೀಡಲಾದ ‘ಫಖ್ರ್-ಎ-ಕೌಮ್’ ಬಿರುದನ್ನು ಹಿಂಪಡೆಯಲಾಯಿತು.
ಶಿಕ್ಷೆಯನ್ನು ಜಥೇದಾರ ಗಿಯಾನಿ ರಘಬೀರ್ ಸಿಂಗ್ ಅವರು ಘೋಷಿಸಿದರು. ಶಿರೋಮಣಿ ಅಕಾಲಿ ದಳ (ಎಸ್‌ಎಡಿ) ಅಧ್ಯಕ್ಷ ಮತ್ತು ಕಚೇರಿಗೆ ಚುನಾವಣೆ ನಡೆಸಲು ಸಮಿತಿಯನ್ನು ರಚಿಸುವುದರ ಜೊತೆಗೆ ಪಕ್ಷದ ಮುಖ್ಯಸ್ಥರಾಗಿ ಸುಖಬೀರ್ ಬಾದಲ್ ಅವರ ರಾಜೀನಾಮೆಯನ್ನು ಅಂಗೀಕರಿಸುವಂತೆ ಶಿರೋಮಣಿ ಅಕಾಲಿದಳದ (ಎಸ್‌ಎಡಿ) ಕಾರ್ಯಕಾರಿ ಸಮಿತಿಗೆ ಸೂಚಿಸಲಾಗಿತ್ತು.ಐದು ಸಿಂಗ್ ಸಾಹಿಬನ್‌ಗಳು (ಸಿಖ್ ಧಾರ್ಮಿಕ ಸಂತರು) 2007 ರಿಂದ 2017 ರ ಅವಧಿಯಲ್ಲಿ ಅಕಾಲಿ ಕ್ಯಾಬಿನೆಟ್‌ನಲ್ಲಿ ಮಂತ್ರಿಗಳಾಗಿ ಸೇವೆ ಸಲ್ಲಿಸಿದ ಇತರ ಸಿಖ್ ನಾಯಕರಿಗೂ ಧಾರ್ಮಿಕ ಶಿಕ್ಷೆಯನ್ನು ಪ್ರಕಟಿಸಿದರು. ಕಾಲು ಮುರಿತದ ಕಾರಣ ಗಾಲಿಕುರ್ಚಿಯಲ್ಲಿದ್ದ ಸುಖಬೀರ್ ಬಾದಲ್ ಮತ್ತು ಬಂಡಾಯ ನಾಯಕ ಸುಖದೇವ್ ಸಿಂಗ್ ಧಿಂಡ್ಸಾ ಅವರನ್ನು ಎರಡು ದಿನಗಳ ಕಾಲ ತಲಾ ಒಂದು ಗಂಟೆಗಳ ಕಾಲ ‘ಸೇವಾದಾರ’ ಡ್ರೆಸ್ ಧರಿಸಿ ಸ್ವರ್ಣ ಮಂದಿರದ ಹೊರಗೆ ಕುಳಿತುಕೊಳ್ಳುವಂತೆ ಸೂಚಿಸಲಾಗಿದೆ ಎಂದು ಗಿಯಾನಿ ರಘಬೀರ್ ಸಿಂಗ್ ಹೇಳಿದ್ದಾರೆ.
ಅವರು ತಖ್ತ್ ಕೇಸ್ಗಢ್ ಸಾಹಿಬ್, ತಖ್ತ್ ದಮ್ದಾಮಾ ಸಾಹಿಬ್, ಮುಕ್ತ್ಸರ್ನಲ್ಲಿ ದರ್ಬಾರ್ ಸಾಹಿಬ್ ಮತ್ತು ಫತೇಘರ್ ಸಾಹಿಬ್ ಇಲ್ಲಿ ತಲಾ ಎರಡು ದಿನಗಳ ಕಾಲ ‘ಸೇವಾದಾರ’ ಸೇವೆಯನ್ನು ನಿರ್ವಹಿಸುತ್ತಾರೆ. ಸುಖಬೀರ್ ಬಾದಲ್ ಮತ್ತು ಸುಖದೇವ್ ದಿಂಡ್ಸಾ ಇಬ್ಬರಿಗೂ ಗೋಲ್ಡನ್ ಟೆಂಪಲ್‌ನಲ್ಲಿ ‘ಕೀರ್ತನೆ’ ಕೇಳುವುದರ ಜೊತೆಗೆ ಭಕ್ತರ ಪಾತ್ರೆಗಳು ಮತ್ತು ಬೂಟುಗಳನ್ನು ಒಂದು ಗಂಟೆ ಸ್ವಚ್ಛಗೊಳಿಸಲು ಸೂಚಿಸಲಾಯಿತು.
ಅಕಾಲ್ ತಖ್ತ್ ಸುಖಬೀರ್ ಬಾದಲ್ ಅವರನ್ನು ‘ತಂಖೈಯಾ’ (ಧಾರ್ಮಿಕ ದುಷ್ಕೃತ್ಯದ ಅಪರಾಧಿ) ಎಂದು ಘೋಷಿಸಿದ ಸುಮಾರು ಮೂರು ತಿಂಗಳ ನಂತರ ಈ ಶಿಕ್ಷೆಯನ್ನು ನೀಡಲಾಗಿದೆ. ಅಕಾಲಿದಳದ ನಾಯಕರಾದ ಸುಚಾ ಸಿಂಗ್ ಲಾಂಗಾ, ಹೀರಾ ಸಿಂಗ್ ಗಾಬ್ರಿಯಾ, ಬಲ್ವಿಂದರ್ ಸಿಂಗ್ ಭುಂದಾರ್, ದಲ್ಜಿತ್ ಸಿಂಗ್ ಚೀಮಾ ಮತ್ತು ಗುಲ್ಜಾರ್ ಸಿಂಗ್ ರಾನಿಕೆ ಅವರಿಗೆ ಸ್ವರ್ಣಮಂದಿರದಲ್ಲಿ ಒಂದು ಗಂಟೆ ಕಾಲ ವಾಶ್ ರೂಂಗಳನ್ನು ಸ್ವಚ್ಛಗೊಳಿಸಲು ಮತ್ತು ಸ್ನಾನ ಮಾಡಿದ ನಂತರ ಸಮುದಾಯದ ಅಡುಗೆಮನೆಯಲ್ಲಿ ಪಾತ್ರೆಗಳನ್ನು ಸ್ವಚ್ಛಗೊಳಿಸಲು ಜಥೇದಾರ ನಿರ್ದೇಶಿಸಿದರು.
ಬೀಬಿ ಜಾಗೀರ್ ಕೌರ್, ಪ್ರೇಮ್ ಸಿಂಗ್ ಚಂದುಮಜ್ರಾ, ಸುರ್ಜಿತ್ ಸಿಂಗ್ ರಖ್ರಾ, ಬಿಕ್ರಮ್ ಸಿಂಗ್ ಮಜಿಥಿಯಾ, ಮಹೇಶ್ ಇಂದರ್ ಸಿಂಗ್ ಗ್ರೆವಾಲ್, ಚರಂಜಿತ್ ಸಿಂಗ್ ಅಟ್ವಾಲ್, ಮತ್ತು ಆದೇಶ್ ಪರತಾಪ್ ಸಿಂಗ್ ಕೈರೋನ್ ಸೇರಿದಂತೆ ಇತರ ಅಕಾಲಿ ನಾಯಕರಿಗೆ ಸ್ವರ್ಣ ಮಂದಿರದಲ್ಲಿ ಒಂದು ಗಂಟೆ ಕಾಲ ವಾಶ್ ರೂಂಗಳನ್ನು ಸ್ವಚ್ಛಗೊಳಿಸಲು ಸೂಚಿಸಲಾಯಿತು