ಲೋಕಸಭೆ ಚುನಾವಣೆಯಲ್ಲಿ ದೇಶದಲ್ಲಿ ಮತ್ತೆ ನರೇಂದ್ರ ಮೋದಿ ನೇತೃತ್ವದ ಎನ್‌ಡಿಎ ಮತ್ತೆ ಅಧಿಕಾರಕ್ಕೆ ಬರಲಿದೆ ಎಂದು ಬಹುತೇಕ ಸಮೀಕ್ಷೆಗಳು ಹೇಳಿವೆ. ಕರ್ನಾಟಕದಲ್ಲಿಯೂ ಬಹುತೇಕ ಎಲ್ಲ ಸಮೀಕ್ಷೆಗಳು ಎನ್‌ಡಿಎ (ಬಿಜೆಪಿ+ ಜೆಡಿಎಸ್ ಮೈತ್ರಿಕೂಟ ಹೆಚ್ಚಿನ ಸ್ಥಾನಗಳನ್ನು ಗೆಲ್ಲಲಿದೆ ಎಂದು ಹೇಳಿದೆ. ಕರ್ನಾಟಕದಲ್ಲಿ 28 ಸ್ಥಾನಗಳಿದ್ದು, ಇದರಲ್ಲಿ ಎನ್‌ಡಿಎ ಮೈತ್ರಿಕೂಟ ಮುನ್ನಡೆ ಕಾಯ್ದುಕೊಂಡಿದೆ ಎಂದು ಸಮೀಕ್ಷೆ ಹೇಳುತ್ತಿದೆ.
ಇಂಡಿಯಾ ಟುಡೇ ಹಾಗೂ ಆ್ಯಕ್ಸಿಸ್ ಸಂಸ್ಥೆಗಳು ನಡೆಸಿರುವ ಸರ್ವೇಯ ಪ್ರಕಾರ, ಬಿಜೆಪಿಗೆ 20ರಿಂದ 22 ಸ್ಥಾನ, ಕಾಂಗ್ರೆಸ್ ಗೆ 3ರಿಂದ 5 ಸ್ಥಾನ ಹಾಗೂ ಜೆಡಿಎಸ್ ಗೆ 2ರಿಂದ 3 ಸ್ಥಾನ ಸಿಗಲಿದೆ. ಇದು ಕಳೆದ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ 135ರ ಆಸುಪಾಸು ಸ್ಥಾನಗಳನ್ನು ಗೆಲ್ಲಬಹುದು ಎಂದು ಬಹುತೇಕ ಕರಾರುವಾಕ್ ಹೇಳಿತ್ತು.
ಟಿವಿ9 ಪೋಲ್ಸ್ಟ್ರಾಟ್ ಮತಗಟ್ಟೆ ಸಮೀಕ್ಷೆ ಪ್ರಕಾರ, ಕರ್ನಾಟಕದಲ್ಲಿ ಬಿಜೆಪಿ ಈ ಬಾರಿ 18 ಸ್ಥಾನಗಳನ್ನು ಪಡೆಯಲಿದ್ದು, ಎನ್‌ಡಿಎ 20 ಸ್ಥಾನಗಳನ್ನು ಪಡೆಯಲಿದೆ. ಕಾಂಗ್ರೆಸ್ 8 ಸ್ಥಾನಗಳನ್ನು ಗೆಲ್ಲಲಿದೆ. ಕಳೆದ ಬಾರಿ 1 ಸ್ಥಾನವನ್ನಷ್ಟೇ ಗಳಿಸಿದ್ದ ಕಾಂಗ್ರೆಸ್ ಈ ಬಾರಿ ಬಲ ವೃದ್ಧಿಸಿಕೊಂಡಿದೆ. ಕಳೆದ ಬಾರಿ ಒಂದು ಸ್ಥಾನ ಗೆದ್ದಿರುವ ಈ ಬಾರಿಗೆ ಬಿಜೆಪಿ ಜೊತೆಗೆ ಮೈತ್ರಿಮಾಡಿಕೊಂಡ ನಂತರ 2 ಸ್ಥಾನ ಗಳಿಸಲಿದೆ.
ಆಕ್ಸಿಸ್ ಮೈ ಇಂಡಿಯಾ -ಎನ್‌ಡಿಎ 23-25 ಸ್ಥಾನಗಳನ್ನು ಗೆಲ್ಲಲಿದೆ. ಕಾಂಗ್ರೆಸ್ 3-5 ಸ್ಥಾನಗಳಲ್ಲಿ ಗೆಲುವು ಸಾಧಿಸಬಹುದು ಎಂದು ಹೇಳಿದೆ. ಟುಡೇಸ್ ಚಾಣಕ್ಯದ ಪ್ರಕಾರ ಕರ್ನಾಟಕದಲ್ಲಿ ಎನ್‌ಡಿಎ 24 ಸ್ಥಾನಗಳಲ್ಲಿ ಗೆಲ್ಲಬಹುದು. ಇದರಲ್ಲಿ +/-4 ಆಗಬಹುದು ಎಂದು ಹೇಳಿದೆ. ಇದೇರೀತಿ ಕಾಂಗ್ರೆಸ್ 4 ಸ್ಥಾನಗಳನ್ನು ಗೆಲ್ಲಬಹುದು. +/- 4 ಆಗಬಹುದು ಎಂದು ಹೇಳಿದೆ.
ಸಿಎನ್ ಎಕ್ಸ್ ಸಂಸ್ಥೆಯ ಸಮೀಕ್ಷಾ ವರದಿ ಬಿಜೆಪಿ ಹಾಗೂ ಜೆಡಿಎಸ್ ಮೈತ್ರಿಕೂಟಕ್ಕೆ 19ರಿಂದ 25 ಸ್ಥಾನ ಸಿಗಬಹುದೆಂದು ಹೇಳಿದೆ. ಕಾಂಗ್ರೆಸ್ಸಿಗೆ 4ರಿಂದ 8 ಸ್ಥಾನ ಸಿಗಬಹುದು ಎಂದು ಹೇಳಿದೆ. ಎಬಿಪಿ – ಸಿ ವೋಟರ್ ಸಮೀಕ್ಷೆ ಪ್ರಕಾರ,ಎನ್ ಎನ್‌ಡಿಎಗೆ (ಬಿಜೆಪಿ ಹಾಗೂ ಜೆಡಿಎಸ್) 22ರಿಂದ 25 ಸ್ಥಾನ ಸಿಗಲಿದೆ. ಹಾಗೂ ಕಾಂಗ್ರೆಸ್ ಗೆ 3ರಿಂದ 5 ಸ್ಥಾನ ಗೆಲ್ಲಲಿದೆ ಎಂದು ಹೇಳಿದೆ.
ಇಂಡಿಯಾ ಟಿವಿ ನಡೆಸಿರುವ ಸಮೀಕ್ಷೆ ಕರ್ನಾಟಕದಲ್ಲಿ ಬಿಜೆಪಿಯು 18ರಿಂದ 22 ಸ್ಥಾನ ಗೆಲ್ಲಬಹುದು ಎಂದು ಹೇಳಿದೆ. ಕಾಂಗ್ರೆಸ್ 4ರಿಂದ 8 ಸ್ಥಾನ ಹಾಗೂ ಜೆಡಿಎಸ್ ಗೆ 1ರಿಂದ 3 ಸ್ಥಾನ ಲಭ್ಯವಾಗಲಿದೆ ಎಂದು ಹೇಳಿದೆ.
ನ್ಯೂಸ್ 18 ಹಾಗೂ ಪೋಲ್ ಹಬ್ ಸಂಸ್ಥೆಗಳ ಜಂಟಿ ಸಮೀಕ್ಷೆಯು ರಾಜ್ಯದಲ್ಲಿ ಜೆಡಿಎಸ್ ಗೆ ರಾಜ್ಯದಲ್ಲಿ 1ರಿಂದ 2 ಸ್ಥಾನ, ಬಿಜೆಪಿಗೆ 21ರಿಂದ 24 ಹಾಗೂ ಕಾಂಗ್ರೆಸ್ ಗೆ 3ರಿಂದ 7 ಸ್ಥಾನ ಸಿಗಬಹುದು ಎಂದು ಹೇಳಿದೆ.