ಬೆಳಗಾವಿ : ಬೆಳಗಾವಿ ಸ್ಮಾರ್ಟ್ ಸಿಟಿ ಯೋಜನೆ ಬಗ್ಗೆ ಈಗ ಮತ್ತೊಮ್ಮೆ ಅಪಸ್ವರ ಕೇಳಿ ಬಂದಿದೆ.
ಇಲ್ಲಿನ ಸ್ಮಾರ್ಟ್ ಸಿಟಿ ಯೋಜನೆಯಲ್ಲಿ ನೂತನ ಸಿಐಟಿ ಐಐಎಸ್ 2.0 ಯೋಜನೆಗೆ ನಿಯಮಬಾಹಿರವಾಗಿ ಯೋಜನಾ ಸಂಯೋಜಕರನ್ನು (ಪ್ರೊಜೆಕ್ಟ್ ಕೋ-ಆರ್ಡಿನೇಟರ್) ನೇಮಕ ಮಾಡಿಕೊಂಡಿರುವ ಆರೋಪ ಕೇಳಿ ಬಂದಿದೆ. ಸಿಐಟಿಐಐಎಸ್ 2.0 ಎನ್ನುವುದು 135 ಕೋಟಿ ರೂ. ವೆಚ್ಚದ, ಕೇಂದ್ರದಿಂದಲೇ ಶೇ.80ರಷ್ಟು ಅನುದಾನ ಒದಗಿಸುವ ಯೋಜನೆ. ಬೆಳಗಾವಿ ಸೇರಿದಂತೆ ದೇಶಾದ್ಯಂತ
ಒಟ್ಟು 18 ನಗರಗಳನ್ನು ಈ ಯೋಜನೆಗೆ ಆಯ್ಕೆ ಮಾಡಲಾಗಿದೆ, ಇದರ ಮೇಲುಸ್ತುವಾರಿಗಾಗಿ ನಿಯಮಾವಳಿ ಪ್ರಕಾರ ಡಿಜಿಎಂ ರ್ಯಾಂಕ್ನ ಅಧಿಕಾರಿಯನ್ನು ಅಥವಾ ಕಾರ್ಯ ನಿರ್ವಾಹಕ ಅಭಿಯಂತರರನ್ನು ಯೋಜನಾ ಸಂಯೋಜಕರಾಗಿ ನೇಮಕ ಮಾಡಿಕೊಳ್ಳ ಬೇಕಿತ್ತು. ಆದರೆ, ಸ್ಟಾರ್ಟ್ ಸಿಟಿಯಲ್ಲಿನ ಸಹಾಯಕ ಎಂಜಿನಿಯರ್ ಒಬ್ಬರನ್ನೇ ನಿಯಮ ಬಾಹಿರವಾಗಿ ನೇಮಕ ಮಾಡಿಕೊಳ್ಳಲಾಗಿದೆ
ಎಂದು ಬೆಳಗಾವಿ ನಿವಾಸಿ ಮಂಜುನಾಥ ಬನಶಂಕರಿ ಎಂಬುವರು ಆರೋಪಿಸಿದ್ದಾರೆ.ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಸ್ಮಾರ್ಟ್ ಸಿಟಿ ವ್ಯವಸ್ಥಾಪಕಿ ಶಾಹಿದ್ ಆಫ್ರೀನ್ ಬಾನು ಬಳ್ಳಾರಿ ಅವರು, ಕೇಂದ್ರ ವಸತಿ ಮತ್ತು ನಗರ ವ್ಯವಹಾರಗಳ ಮಂತ್ರಾಲಯ ಸೂಚಿಸಿರುವ ನಿರ್ದೇಶನದಂತೆ ನಿಯಮಾನುಸಾರವೇ ಸಿಟಿಜ್ 2.0 ಯೋಜನೆಗೆ ನೇಮಕಾತಿ ಮಾಡಿಕೊಳ್ಳಲಾಗಿದೆ. ಯೋಜನಾ ಸಂಯೋಜಕರು ಮಾತ್ರವಲ್ಲದೆ, ಪರಿಸರ ಮತ್ತು ಸಾಮಾಜಿಕ ಸುರಕ್ಷತೆಯ ನೋಡಲ್ ಅಧಿಕಾರಿ ಹಾಗೂ ಸಾರ್ವಜನಿಕ ಸಂಪರ್ಕ ಅಧಿಕಾರಿಯನ್ನೂ ನೇಮಕ ಮಾಡಲಾಗಿದೆ. ಬೆಳಗಾವಿ ಸ್ಮಾರ್ಟ್ ಸಿಟಿ ಲಿ.ನಲ್ಲಿ ಕಾರ್ಯನಿರ್ವಾಹಕ ಅಭಿಯಂತರರು ಇಲ್ಲದಿರುವುದರಿಂದ ಸಹಾ ಯಕ ಅಭಿಯಂತರರನ್ನು ನೇಮಕ ಮಾಡಿ ಕೊಳ್ಳಲಾಗಿದೆ’ ಎಂದು ಸ್ಪಷ್ಟನೆ ನೀಡಿದ್ದಾರೆ.