ಮುಂಬೈ : ತಮ್ಮ ಚುನಾವಣಾ ಭಾಷಣದಲ್ಲಿ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ವೀರ ಸಾವರ್ಕರ್ ಹಾಗೂ ಭಾರತ ಸಂವಿಧಾನ ಅಪಾಯದಲ್ಲಿದೆ ಎಂದು ಪದೇ ಪದೇ ಪ್ರಸ್ತಾಪ ಮಾಡುವ ಮೂಲಕ ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಇಂಡಿಯಾ ಮೈತ್ರಿಕೂಟ ಮುಳುಗುವಂತೆ ಮಾಡಿದೆ ಎಂದು ಇದೀಗ ಉದ್ದವ ಠಾಕ್ರೆ ನೇತೃತ್ವದ ಶಿವಸೇನೆ ಹಾಗೂ ಶರತ್ ಪವಾರ್ ಬಣದ ಎನ್ ಸಿಪಿ ಗಂಭೀರ ಆರೋಪ ಮಾಡಿವೆ.

ಮಹಾರಾಷ್ಟ್ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ನೇತೃತ್ವದ ಮಹಾಯುತಿ ಮೈತ್ರಿಕೂಟದ ಮುಂದೆ ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ ಅಘಾಡಿ (ಎಂವಿಎ) ಮಕಾಡೆ ಮಲಗಿದೆ. ಇದರಿಂದಾಗಿ ಈಗ ಇಂಡಿಯಾ ಬ್ಲಾಕ್‌ ನಲ್ಲಿ ಅತೃಪ್ತಿ ಕಾಣಿಸಿಕೊಂಡಿದೆ.
ವಿಪಕ್ಷಗಳ ಇಂಡಿಯಾ ಮೈತ್ರಿಕೂಟದಲ್ಲಿ ಎಲ್ಲವೂ ಸರಿಯಾಗಿಲ್ಲ ಎಂಬುದು ಗೋಚರಕ್ಕೆ ಬಂದಿದೆ. ವಿಪಕ್ಷವು ಮತ್ತೊಂದು ಚುನಾವಣಾ ಸೋಲನ್ನು ಎದುರಿಸಿತು. ಕಾಂಗ್ರೆಸ್ ನೇತೃತ್ವದ ಮಹಾ ವಿಕಾಸ್ ಅಘಾಡಿ (ಎಂವಿಎ) ಅನ್ನು ಮಹಾರಾಷ್ಟ್ರದಲ್ಲಿ ಭಾರತೀಯ ಜನತಾ ಪಕ್ಷ (ಬಿಜೆಪಿ) ನೇತೃತ್ವದ ಮಹಾಯುತಿ ಹೀನಾಯವಾಗಿ ಸೋಲಿಸಿತು. ಕಾಂಗ್ರೆಸ್ ಮುಖ್ಯಸ್ಥ ಮಲ್ಲಿಕಾರ್ಜುನ ಖರ್ಗೆ ಅವರು ಸೋಮವಾರ ಕರೆದಿದ್ದ ಇಂಡಿಯಾ ಮೈತ್ರಿಕೂಟದ ಸಭೆಯಲ್ಲಿ ಅತೃಪ್ತಿ ಗೋಚರಿಸಿತು.

ಸಭೆಯಿಂದ ಹಿಂದೆ ಸರಿದ ಮೊದಲನೆ ಪಕ್ಷ ತೃಣಮೂಲ ಕಾಂಗ್ರೆಸ್ (ಟಿಎಂಸಿ). ಮಮತಾ ಬ್ಯಾನರ್ಜಿ ನೇತೃತ್ವದ ಪಕ್ಷವು ತನ್ನ ನಾಯಕರು ಕೋಲ್ಕತ್ತಾದಲ್ಲಿ ತಮ್ಮ ರಾಷ್ಟ್ರೀಯ ಕಾರ್ಯಕಾರಿಣಿ ಸಭೆಯಲ್ಲಿ ನಿರತರಾಗಿದ್ದಾರೆ ಎಂದು ಸಮಜಾಯಿಷಿ ನೀಡಿ ಸಭೆಯಿಂದ ದೂರ ಉಳಿಯಿತು. ಆದರೆ ಸಂಸತ್ತಿನ ಅಧಿವೇಶನ ಯಾವಾಗ ಆರಂಭವಾಗುತ್ತದೆ ಎಂಬ ಬಗ್ಗೆ ಟಿಎಂಸಿಗೆ ತಿಳಿದಿತ್ತು. ಇದು ಸಂಸತ್ತಿನ ಚಳಿಗಾಲದ ಅಧಿವೇಶನದ ಮೊದಲ ದಿನ ನಡೆದ ಸಭೆಯಾಗಿತ್ತು. ಆದರೂ ಟಿಎಂಸಿ ಸಭೆಯಿಂದ ದೂರವೇ ಉಳಿಯಿತು. ಪಶ್ಚಿಮ ಬಂಗಾಳದಲ್ಲಿ ಉಪಚುನಾವಣೆ ನಡೆದ ಎಲ್ಲಾ ಆರು ವಿಧಾನಸಭಾ ಕ್ಷೇತ್ರಗಳಲ್ಲಿ ಟಿಎಂಸಿ ಜಯಗಳಿಸಿದ ನಂತರ ಟಿಎಂಸಿ ಪ್ರಧಾನ ಕಾರ್ಯದರ್ಶಿ ಕುನಾಲ್ ಘೋಷ್ ಇಂಡಿಯಾ ಮೈತ್ರಿಕೂಟದಲ್ಲಿ ಕಾಂಗ್ರೆಸ್‌ನ ‘ದೊಡ್ಡಣ್ಣ’ ಧೋರಣೆಯೊಳಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

“ಮಮತಾ ಬ್ಯಾನರ್ಜಿ ಅವರು ಪ್ರತಿ ಚುನಾವಣೆಯಲ್ಲೂ ಬಿಜೆಪಿಯನ್ನು ತಡೆದಿದ್ದಾರೆ. ಜಾರ್ಖಂಡ್‌ನಲ್ಲಿ ಹೇಮಂತ್ ಸೋರೆನ್ ಬಿಜೆಪಿಯನ್ನು ತಡೆದಿದ್ದಾರೆ. ಆದರೆ ಮಹಾರಾಷ್ಟ್ರದಲ್ಲಿ ಅವರಿಗೆ(ಕಾಂಗ್ರೆಸ್) ಬಿಜೆಪಿಯನ್ನು ತಡೆಯಲು ಸಾಧ್ಯವಾಗಲಿಲ್ಲ ಎಂದು ಹೇಳಿದ ಘೋಷ್ ಅವರು ಕಾಂಗ್ರೆಸ್‌ “ತನ್ನುನ್ನು ವಿಶ್ಲೇಷಿಸಿಕೊಳ್ಳಲಿ” ಎಂದು ಸಲಹೆ ನೀಡಿದ್ದಾರೆ.
“ಬಂಗಾಳ ಮತ್ತು ಜಾರ್ಖಂಡ್‌ನಲ್ಲಿ ಅದು ಆಗಬಹುದಾದರೆ, ಹರಿಯಾಣ ಮತ್ತು ಮಹಾರಾಷ್ಟ್ರದಲ್ಲಿ ಬಿಜೆಪಿಯನ್ನು ತಡೆಯಲು ಕಾಂಗ್ರೆಸ್ ಏಕೆ ವಿಫಲವಾಯಿತು? ಕಾಂಗ್ರೆಸ್ ಏಕೆ ಸೋತಿತು ಎಂಬುದನ್ನು ಕಾಂಗ್ರೆಸ್ ವಿಶ್ಲೇಷಿಸಬೇಕು ಎಂದು ಅವರು ಹೇಳಿದ್ದಾರೆ.

ಟಿಎಂಸಿಯ ನಾಯಕ ಕಲ್ಯಾಣ ಬ್ಯಾನರ್ಜಿ ಅವರು ಮಮತಾ ಬ್ಯಾನರ್ಜಿ ಅವರನ್ನು ಇಂಡಿಯಾ ಮೈತ್ರಿಕೂಟದ ನಾಯಕಿಯನ್ನಾಗಿ ಮಾಡಬೇಕೆಂದು ಸಲಹೆ ನೀಡಿದ ನಂತರ ಟಿಎಂಸಿಯ ಅಸಮಾಧಾನವು ಗಂಭೀರ ಸ್ವರೂಪದ್ದು ಎಂಬುದು ಗೋಚರಿಸುವಂತಾಯಿತು.

ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಮಾಡಿದ ಪ್ರಮುಖ ತಪ್ಪುಗಳು ಯಾವುವು?
ನ್ಯೂಸ್ 18 ವರದಿಯ ಪ್ರಕಾರ, ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಅವರು ಮೂರು “ತಪ್ಪುಗಳನ್ನು” ಮಾಡಿದ್ದಾರೆ, ಮೈತ್ರಿಕೂಟದ ಮಿತ್ರಪಕ್ಷಗಳು ತಮ್ಮ ಪಕ್ಷಗಳ ಮೇಲೆ ಪ್ರಭಾವ ಬೀರಿವೆ ಎಂದು ಭಾವಿಸುತ್ತಾರೆ.
ರಾಹುಲ್ ಗಾಂಧಿ ವೀರ್ ಸಾವರ್ಕರ್ ವಿರುದ್ಧ ವಾಗ್ದಾಳಿ ನಡೆಸಿದರು. ಶಿವಸೇನೆ (ಯುಬಿಟಿ) ಮುಖ್ಯಸ್ಥ ಉದ್ಧವ್ ಠಾಕ್ರೆ ಮತ್ತು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ (ಎನ್‌ಸಿಪಿ) ಬಣದ ಮುಖ್ಯಸ್ಥ ಶರದ್ ಪವಾರ್ ಇಬ್ಬರೂ ಈ ಸಮಸ್ಯೆ ಎದುರಿಸಿದರು.

ಮಹಾರಾಷ್ಟ್ರದ ಚುನಾವಣಾ ಸೋಲಿನ ನಂತರ, ಇಬ್ಬರೂ ನಾಯಕರು ಸಾವರ್ಕರ್ ಅವರ ಮೇಲಿನ ರಾಹುಲ್‌ ಗಾಂಧಿ ನಡೆಸಿದ ವಾಗ್ದಾಳಿಯಿಂದ ತಮಗೆ ಹಾನಿಯಾಗಿದೆ ಎಂದು ಭಾವಿಸಿದ್ದಾರೆ. ಮತ್ತು ಬಿಜೆಪಿಗೆ ಅದರ ಅಜೆಂಡಾ “ಬಾಟೇಂಗೆ ತೋ ಕಟೇಂಗೆ” ಅದಕ್ಕೆ ಚುನಾವಣೆಯಲ್ಲಿ ಸಹಾಯ ಮಾಡಿದೆ. ವೀರ್ ಸಾವರ್ಕರ್ ವಿರುದ್ಧದ ವಾಗ್ದಾಳಿ ಹಾನಿಯನ್ನುಂಟುಮಾಡುತ್ತದೆ ಎಂಬ ಎಚ್ಚರಿಕೆಯ ಹೊರತಾಗಿಯೂ ರಾಹುಲ್‌ ಗಾಂಧಿಯವರು ಗಮನ ಕೊಡಲಿಲ್ಲ ಮತ್ತು ಅದನ್ನು ಮುಂದುವರಿಸಿದರು ಎಂದು ನ್ಯೂಸ್ 18 ವರದಿ ಉಲ್ಲೇಖಿಸಿದೆ.

ಜಾತಿ ಸಮೀಕ್ಷೆಗಾಗಿ ರಾಹುಲ್ ಗಾಂಧಿಯವರ ಬೇಡಿಕೆ ಮತ್ತು ಕಾಂಗ್ರೆಸ್‌ ಪಕ್ಷವು ಅಧಿಕಾರಕ್ಕೆ ಬಂದರೆ ಮೀಸಲಾತಿ ಕೊನೆಗೊಳಿಸುತ್ತದೆ ಎಂಬ ಬಿಜೆಪಿಯ ನಿರೂಪಣೆಯನ್ನು ಎದುರಿಸಲು ಕಾಂಗ್ರೆಸ್‌ ವಿಫಲವಾಯಿತು ಎಂಬುದು ಮೈತ್ರಿಯು ಹೇಳುವ ಮತ್ತೊಂದು ಅಂಶವಾಗಿದೆ.

ಕ್ಯಾಪಿಟಲಿಸಂನಲ್ಲಿ ಪ್ರಧಾನಿ ಮೋದಿ ಭಾಗಿಯಾಗಿದ್ದಾರೆ ಎಂದು ವಾಗ್ದಾಳಿ ನಡೆಸುವುದು ಚುನಾವಣೆಯಲ್ಲಿ ಕೆಲಸ ಮಾಡುವುದಿಲ್ಲ ಎಂದು ಅನೇಕ ಮಿತ್ರ ಪಕ್ಷಗಳ ನಾಯಕರು ಭಾವಿಸಿದ್ದರು. ಅದಕ್ಕಾಗಿ ಇದಕ್ಕೆ ಮಹತ್ವ ಬೇಡ ಎಂದು ಅವರು ರಾಹುಲ್‌ ಗಾಂಧಿಗೆ ಹೇಳಿದ್ದರು. ಆದರೆ ಅವರು ಗಮನ ಹರಿಸಲಿಲ್ಲ. ಪದೇ ಪದೇ ಈ ವಿಷಯ ಪ್ರಸ್ತಾಪಿಸಿದರು.
ಮೂಲಗಳು ಹೇಳುವಂತೆ ಗಾಂಧಿಯವರ ಗುಂಪಿನಲ್ಲಿರುವ ಕೆಲವರು ಕೂಡ ಅವರಿಗೆ “ಸಂವಿಧಾನ ಅಪಾಯದಲ್ಲಿದೆ” ಎಂದು ಪದೇ ಪದೇ ಹೇಳುವುದು ಬೇಡ ಎಂದು ಸಲಹೆ ನೀಡಿದ್ದರು, ಆದರೆ ರಾಹುಲ್‌ ಗಾಂಧಿ ಅದನ್ನು ಬಿಡಲು ನಿರಾಕರಿಸಿದರು, ಅದನ್ನು ಪ್ರಮುಖ ವಿಷಯವೆಂದು ಪರಿಗಣಿಸಿದರು. ಅದು ಈಗ ಮಿತ್ರಪಕ್ಷಗಳ ಅತೃಪ್ತಿಗೆ ಕಾರಣವಾಗಿದೆ ಎಂದು ಹೇಳಲಾಗಿದೆ.