ಬೆಂಗಳೂರು :
ಜನವರಿ 26 : ಕರ್ನಾಟಕ ಸೇರಿದಂತೆ ದೇಶದಾದ್ಯಂತ 75ನೇ ಗಣರಾಜ್ಯೋತ್ಸವದ ಸಂಭ್ರಮ ಮನೆಮಾಡಿತ್ತು .
75ನೇ ಗಣರಾಜ್ಯೋತ್ಸವ ಹಿನ್ನೆಲೆ ಇಂದು ರಾಜ್ಯ
ರಾಜಧಾನಿ ಬೆಂಗಳೂರಿನ ಬನಶಂಕರಿ 3 ನೇ ಹಂತದ ಗುರುದತ್ತ ಬಡಾವಣೆಯಲ್ಲಿ ಇರುವ
ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತದ ವತಿಯಿಂದ – 26-01-2024 ಶುಕ್ರವಾರ ಬೆಳಿಗ್ಗೆ 8ಗಂಟೆಗೆ ಸರಿಯಾಗಿ 75 ನೇ (ಅಮೃತ ಮಹೋತ್ಸವ)ಗಣರಾಜ್ಯೋತ್ಸವ ದಿನಾಚರಣೆಯನ್ನು ಆಚರಿಸಲಾಯಿತು.
ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತದ ಅಧ್ಯಕ್ಷರಾದ ಶ್ರೀ ನವೀನ್ ಕುಮಾರ್ ಪೆ.ನಾ ಧ್ವಜಾರೋಹಣ ಮಾಡಿ ಮಾತನಾಡುತ್ತಾ ರಾಮಮಂದಿರದಲ್ಲಿ ಶ್ರೀ ರಾಮ ಲಾಲನ ಪ್ರಾಣ ಪ್ರತಿಷ್ಠೆ ಮಾಡಿರುವ ದೇಶದ ಪ್ರಾಧಾನಿ ನರೇಂದ್ರ ಮೋದಿ ಜೀ ಅವರು ಈ ಬಾರಿಯ ಗಣ ರಾಜ್ಯೋತ್ಸವದ ಮೆರೆಗು ಹೆಚ್ಚಿಸಿ ದೇಶದಲ್ಲಿ ಸನಾತನ ಸಂಸ್ಕೃತಿ ಜೊತೆ ಜೊತೆಗೆ ದೇಶದ ಸಾಂಸ್ಕೃತಿಕ ಮೌಲ್ಯಗಳನ್ನು ಶ್ರೀಮಂತ ಗೊಳಿಸಿದ್ದಾರೆ ಎಂದು ನುಡಿದರು.
ಹಿರಿಯ ಉಪನ್ಯಾಸಕರಾದ ಶ್ರೀ ವಸಂತ ರವರು ಮಾತನಾಡಿ ಸಂವಿಧಾನ ರಚನೆ, ಜಾರಿ, ಕುರಿತು ವಿವರಿಸಿ, ದೇಶದ ಸಮಸ್ತ ಜನತೆಗೆ 75ನೇ ಗಣರಾಜ್ಯೋತ್ಸವದ ಶುಭಾಶಯ ತಿಳಿಸಿ, ಹಾಗೇ ದೇಶಭಕ್ತಿ ಗೀತೆ ಹಾಡಿದರು.
ಪುಟಾಣಿ ಮಕ್ಕಳುಗಳಾದ ಶಾರ್ವರಿ, ಸುಧನ್ವ ವೈಷ್ಣವಿ ತಂಡ ದೇಶ ಭಕ್ತಿ ಗೀತೆ ಹಾಡಿದರು.
ಸಾಕೇತ್ ಅಪಾರ್ಟ್ಮೆಂಟ್ ನಿವಾಸಿಗಳು, ಮಕ್ಕಳು ಹಾಜರಿದ್ದು ಕಾರ್ಯಕ್ರಮವನ್ನು ಯಶಸ್ವಿಯಾಗಿಸಿದರು.
ಸಾಕೇತ್ ಅಪಾರ್ಟ್ಮೆಂಟ್ ಮಾಲೀಕರ ಸಹಕಾರ ಸಂಘ ನಿಯಮಿತ ದ ಕಾರ್ಯದರ್ಶಿ ಶ್ರೀ ಚಂದ್ರಶೇಖರರವರು ಅತಿಥಿ ಗಳನ್ನು ಸ್ವಾಗತಿಸಿ,ಕಾರ್ಯಕ್ರಮ ನಿರೂಪಿಸಿದರು.
ಬರಹ : ತೀರ್ಥಹಳ್ಳಿ ಅನಂತ ಕಲ್ಲಾಪುರ