ದೆಹಲಿ : ವಾಯು ಸೇನೆಯ ಮುಖ್ಯಸ್ಥರಾಗಿ ಏರ್ ಚೀಫ್ ಮಾರ್ಷಲ್ ಅಮರ ಪ್ರೀತ್ ಸಿಂಗ್ ನೇಮಕಗೊಂಡಿದ್ದಾರೆ. ಇದುವರೆಗೆ ಸಮುಖ್ಯಸ್ಥರಾಗಿದ್ದ ವಿ.ಆರ್.ಚೌಧರಿ ಸೆ.30 ರಂದು ನಿವೃತ್ತರಾಗಲಿದ್ದಾರೆ. ಅವರಿಂದ ಸಿಂಗ್ ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಅಮರ್ ಪ್ರೀತ್ ಸಿಂಗ್ 5000 ಗಂಟೆ ಕಾಲ ಯುದ್ಧ ವಿಮಾನ ಹಾರಾಟ ನಡೆಸಿದ ಅನುಭವ ಹೊಂದಿದ್ದಾರೆ. ಸದ್ಯ ಅವರು ವಾಯು ಸೇನೆ ಉಪಮುಖ್ಯಸ್ಥರು.
ಪಿವಿಎಸ್ಎಂ, ಎವಿಎಸ್ಎಂ ಹಾಗೂ ವಾಯು ಸೇನೆಯಲ್ಲಿ ಸದ್ಯ ಉಪಮುಖ್ಯಸ್ಥರನ್ನಾಗಿ ಸರಕಾರ ಇದುವರೆಗೆ ಅವರನ್ನು ನಿಯೋಜಿಸಿದೆ. ಸೆಪ್ಟೆಂಬರ್ 30ರಂದು ಅವರು ವಾಯು ಸೇನೆಯ ನೂತನ ಏರ್ ಚೀಫ್ ಮಾರ್ಷಲ್ ಆಗಿ ಅಧಿಕಾರ ವಹಿಸಿಕೊಳ್ಳಲಿದ್ದಾರೆ.