ಬೆಳ್ವೆ :
ಅಮಾಸೆಬೈಲ್ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮೂಲಭೂತ ಸೌಕರ್ಯ ಕೆಳಸುಂಕ ಪರಿಸರದಲ್ಲಿ ಸೌಲಭ್ಯ ವಂಚಿತ ಪರಿಶಿಷ್ಟ ಪಂಗಡ ಕಾಲೋನಿ ನಿವಾಸಿಗಳು ಮುಂಬರುವ ಲೋಕಸಭಾ
ಚುನಾವಣೆಯನ್ನು ಬಹಿಷ್ಕಾರಿಸುವುದಾಗಿ ಕೆರೆಗದ್ದೆ ಬಳಿ
ಮಂಗಳವಾರ ( ಫೆ.13)ರಂದು ಬೆಳಿಗ್ಗೆ ಬ್ಯಾನರನ್ನು
ಅಳವಡಿಸಿದ್ದರು.

ಅಮಾಸೆಬೈಲು ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಮತ್ತು ಸಿಬ್ಬಂದಿಗಳು ಬೆಳಿಗ್ಗೆ 11 ಗಂಟೆ ಸಮಯಕ್ಕೆ ಪರಿಶಿಷ್ಟ ಪಂಗಡದ ನಿವಾಸಿಗಳಿಗೆ ಯಾವುದೇ ಮಾಹಿತಿಯನ್ನು ನೀಡದೇ ನೊಂದ ದಲಿತ ಕಾಲೋನಿಯ ನಿವಾಸಿಗಳನ್ನು ಭೇಟಿ ಮಾಡದೆ ಚುನಾವಣೆ ಬಹಿಷ್ಕಾರದ ಬ್ಯಾನರನ್ನು ಏಕಾಏಕಿ
ತೆಗೆದುಕೊಂಡು ಹೋಗಿರುವ ಬಗ್ಗೆ ಅಮಾಸೆಬೈಲು ದಲಿತ ಸಂಘಟನೆ ವಿರೋಧಿಸಿದೆ. ಅಮಾಸೆಬೈಲು ಗ್ರಾಮದ ವ್ಯಾಪ್ತಿಯಲ್ಲಿ ಎಲ್ಲ ಕಡೆ ಪರವಾನಿಗೆ ಇಲ್ಲದೆ ಇರುವ ಬ್ಯಾನರ್ ಬಂಟಿಂಗ್ಸ್ ಗಳನ್ನು ತೆರವು ಗೊಳಿಸಲು
ಕ್ರಮ ಕೈಗೊಳ್ಳದಿರುವ ಗ್ರಾಮ ಪಂಚಾಯಿತಿಯವರು
ಪರಿಶಿಷ್ಟ ಪಂಗಡದ ನಿವಾಸಿಗಳು ಮುಂಬರುವ ಲೋಕಸಭಾ ಚುನಾವಣೆ ಬಹಿಷ್ಕಾರದ ಬಗ್ಗೆ ಅಳವಡಿಸಿದ ಬ್ಯಾನರ್ ತೆರವುಗೊಳಿಸಿರುವುದನ್ನು ಖಂಡಿಸಿದ್ದಾರೆ.