ನವದೆಹಲಿ: ಫೋರ್ಲ್ಸ್ ಮ್ಯಾಗಜಿನ್ ವಿಶ್ವದ ಶ್ರೀಮಂತ ವ್ಯಕ್ತಿಗಳ ಪಟ್ಟಿ ಬಿಡುಗಡೆ ಮಾಡಿದೆ. ರಿಲಯನ್ಸ್ ಮುಖ್ಯಸ್ಥ ಮುಕೇಶ್ ಅಂಬಾನಿ 9.6 ಲಕ್ಷ ಕೋಟಿ ರು. ಆಸ್ತಿಯೊಂದಿಗೆ ಮೊದಲ ಬಾರಿಗೆ ಅಗ್ರ 10ರ ಒಳಗೆ ಸ್ಥಾನ ಪಡೆದಿದ್ದಾರೆ. ಅದಾನಿ ಸಮೂಹದ ಮುಖ್ಯಸ್ಥ ಗೌತಮ್ ಅದಾನಿ 6.9 ಲಕ್ಷ ಕೋಟಿ ರು. ಮೌಲ್ಯದೊಂದಿಗೆ ವಿಶ್ವ 17ನೇ ಸ್ಥಾನ ಮತ್ತು ಭಾರತದ 2ನೇ ಶ್ರೀಮಂತ ಎಂಬ ದಾಖಲೆ ಪಡೆದಿದ್ದಾರೆ.