ಬೆಳಗಾವಿ : ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆ ಇದೀಗ ಬೆಳಗಾವಿ – ನಾಸಿಕ್ ಮಾರ್ಗದಲ್ಲಿ ಮೊದಲ ಮಲ್ಟಿ ಆಕ್ಸೆಲ್ ವೋಲ್ಲೋ ಅಂಬಾರಿ ಉತ್ಸವ ಎಸಿ ಸ್ಲಿಪರ್ ಸೇವೆ ಆರಂಭಿಸಿದೆ. ಈ ಮಾರ್ಗದಲ್ಲಿ ಬಸ್ ಸಮಯ ಒಂದೇ ಆಗಿರುತ್ತದೆ. ಬೆಳಗಾವಿಯನ್ನು ಸಂಜೆ 5:30ಕ್ಕೆ ಬಿಟ್ಟು ನಾಸಿಕ್‌ಗೆ ಬೆಳಗ್ಗೆ 05:45ಕ್ಕೆ ತಲುಪಲಿದೆ. ನಾಸಿಕ್‌ನಲ್ಲಿ ಸಂಜೆ 6:00 ಗಂಟೆಗೆ ಹೊರಡುವ ಬಸ್‌ ಬೆಳಗಾವಿಗೆ ಬೆಳಗ್ಗೆ 6ಕ್ಕೆ ತಲುಪಲಿದೆ. ₹1400 ದರ ನಿಗದಿ ಮಾಡಲಾಗಿದೆ. ಈ ಬಸ್ ಸಂಕೇಶ್ವರಕ್ಕೆ ಸಂಜೆ 6.30ಕ್ಕೆ ಮತ್ತು ನಿಪ್ಪಾಣಿಗೆ 7.15ಕ್ಕೆ ತಲುಪುತ್ತದೆ.