ಹೆಬ್ರಿ : “ಮಕ್ಕಳನ್ನು ಆಂತರಿಕವಾಗಿ ಸದೃಢಗೊಳಿಸುವ, ಕೇವಲ ಪರೀಕ್ಷೆಗೆ ಸೀಮಿತವಾಗದೆ ಭವಿಷ್ಯದ ಬದುಕನ್ನೂ ಗೆಲ್ಲುವ ಸಂಸ್ಕಾರಯುತ ಶಿಕ್ಷಣ ಇಂದು ಬೇಕಾಗಿದೆ. ಈ ದಿಸೆಯಲ್ಲಿ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳು ಮುಂಚೂಣಿಯಲ್ಲಿದ್ದು, ಸ್ವಾರ್ಥ ರಹಿತ, ಲಾಭದ ಉದ್ದೇಶವಿಲ್ಲದೆ ಕಾರ್ಯಾಚರಿಸುತ್ತಿದ್ದು, ಮಾದರಿ ಶಿಕ್ಷಣ ಸಂಸ್ಥೆಗಳಾಗಿ ಹೊರಹೊಮ್ಮಿದೆ,” ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಹೆಬ್ರಿ ಮಿಥಿಲಾ ನಗರದ ಪಾಂಡುರಂಗ ರಮಣ ನಾಯಕ್ ಅಮೃತಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳ ವಾರ್ಷಿಕೋತ್ಸವವನ್ನು ಶನಿವಾರ ಉದ್ಘಾಟಿಸಿ ಮಾತನಾಡಿದರು.
ಸಂಸ್ಥೆಯ ಮಹಾದಾನಿಯ ಸ್ಮರಣೆ: ಸಂಸ್ಥೆಗೆ ತಮ್ಮ ತೀರ್ಥರೂಪರ ಹೆಸರಲ್ಲಿ ಸುಮಾರು 4 ಕೋಟಿಗೂ ಮಿಕ್ಕಿ ಧನಸಹಾಯ ನೀಡಿದ ಮಹಾದಾನಿ ದಿ.ಎಚ್.ರಮಣ ನಾಯಕ್ ಅವರನ್ನು ಸ್ಮರಿಸಲಾಯಿತು. ಸಂಸ್ಥೆಯ ಶೈಕ್ಷಣಿಕ, ಸಾಂಸ್ಕೃತಿಕ ಮತ್ತು ಕ್ರೀಡಾ ಸಾಧಕರಿಗೆ ಪ್ರಶಸ್ತಿ ಪುರಸ್ಕಾರ ನಡೆಯಿತು.
ಅಮೃತಭಾರತಿ ಟ್ರಸ್ಟ್ ಅಧ್ಯಕ್ಷ ಸಿಎ ಎಂ.ರವಿ ರಾವ್ ಅಧ್ಯಕ್ಷತೆ ವಹಿಸಿದ್ದರು. ಸ್ಥಾಪಕಾಧ್ಯಕ್ಷ ಎಚ್.ಸತೀಶ್ ಪೈ, ಕಾಲೇಜಿನ ಅಧ್ಯಕ್ಷ ಎಚ್. ರಾಜೇಶ್ ನಾಯಕ್, ಟ್ರಸ್ಟ್ ಕಾರ್ಯದರ್ಶಿ ಎಚ್. ಗುರುದಾಸ್ ಶೆಣೈ, ಹಾಸ್ಟೆಲ್ ಕಮಿಟಿ ಅಧ್ಯಕ್ಷ ಎಚ್.ಯೋಗೀಶ್ ಭಟ್, ವಿದ್ಯಾಲಯದ ಅಧ್ಯಕ್ಷ ಶೈಲೇಶ್ ಕಿಣಿ, ಅಂಕಣಕಾರ ಹೆ.ಬಾ.ಮಲ್ಯ, ಪ್ರಿನ್ಸಿಪಾಲ್ ಅಮರೇಶ್ ಹೆಗ್ಡೆ, ಪಿಆರ್ಒ ವಿಜಯ ಕುಮಾರ್ ಶೆಟ್ಟಿ ಸಹಸಂಸ್ಥೆಗಳ ಮುಖ್ಯ ಶಿಕ್ಷಕರಾದ ಅರುಣ್, ಅನಿತಾ ಮಾತಾಜಿ, ಅಪರ್ಣಾ ಮಾತಾಜಿ, ಶಕುಂತಲಾ ಮಾತಾಜಿ, ವಿದ್ಯಾರ್ಥಿ ಮುಖಂಡರಾದ ಪದ್ಮಶ್ರೀ, ಶ್ರೀರಾಮ್ ಬಡಾಜೆ, ರಚಿತಾ ಮಂಜ ಉಪಸ್ಥಿತರಿದ್ದರು.
ಸಭಾ ಕಾರ್ಯಕ್ರಮದ ಬಳಿಕ ಸಂಸ್ಥೆಯ ವಿದ್ಯಾರ್ಥಿಗಳಿಂದ ವಿವಿಧ ಮನೋರಂಜನಾ ಕಾರ್ಯಕ್ರಮ ಜರುಗಿತು. ಪ್ರೀತಿ ಬಿ.ಕೆ. ಮತ್ತು ಪ್ರೀತಿ ಶೆಟ್ಟಿ ಕಾರ್ಯಕ್ರಮ ನಿರೂಪಿಸಿದರು. ಗುರುದಾಸ್ ಶೆಣೈ ಸ್ವಾಗತಿಸಿದರು. ಪ್ರಿನ್ಸಿಪಾಲ್ ಅಮರೇಶ್ ಹೆಗ್ಡೆ ವರದಿ ವಾಚಿಸಿದರು.