ಹೆಬ್ರಿ : ಹೆಬ್ರಿ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜಿನಲ್ಲಿ ಅಮೃತ ಆಸ್ವಾದ ಫುಡ್ ಫೆಸ್ಟ್ ಕಾರ್ಯಕ್ರಮ ನಡೆಯಿತು.
ಕಾರ್ಕಳದ ಉದ್ಯಮಿ ಪ್ರಜ್ವಲ್ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ , ವಿದ್ಯಾರ್ಥಿಗೆ ಪಠ್ಯ. ಪುಸ್ತಕದ ಜ್ಞಾನಕ್ಕಿಂತ ಪ್ರಾಯೋಗಿಕ ಜ್ಞಾನ ಅತ್ಯಂತ ಮುಖ್ಯ . ಆತ್ಮವಿಶ್ವಾಸ , ಏಕಾಗ್ರತೆ , ಮಾತುಗಾರಿಕೆ ಚೆನ್ನಾಗಿ ಇದ್ದು , ಉದ್ಯೋಗ ಆರಂಭಿಸಿ ಶ್ರಮ ವಹಿಸಿ ದುಡಿದರೆ ಎಷ್ಟು ಎತ್ತರಕ್ಕೆ ಬೇಕಾದರೂ ಏರಬಹುದು. ವಿದ್ಯಾರ್ಥಿ ಜೀವನದಲ್ಲೇ ಪ್ರಾಯೋಗಿಕ ವ್ಯಾವಹಾರಿಕ ಜ್ಞಾನ ನೀಡುತ್ತಿರುವ ಅಮೃತ ಭಾರತೀಯ ಶಿಕ್ಷಣ ಮಾದರಿಯಾದುದು ಎಂದರು.
ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷ ರಾಜೇಶ್ ನಾಯಕ್ ಅದ್ಯಕ್ಷತೆ ವಹಿಸಿದ್ದರು . ಟ್ರಸ್ಟಿ ಬಾಲಕೃಷ್ಣ ಮಲ್ಯ , ಪ್ರಾಂಶುಪಾಲ ಅಮರೇಶ್ ಹೆಗ್ಡೆ, ಸಾರ್ವಜನಿಕ ಸಂಪರ್ಕ ಅಧಿಕಾರಿ ವಿಜಯ ಕುಮಾರ್ ಶೆಟ್ಟಿ ಉಪಸ್ಥಿತರಿದ್ದರು.
ವಿದ್ಯಾರ್ಥಿಗಳಾದ ಆದಿತ್ಯ ಶೆಟ್ಟಿ ನಿರೂಪಿಸಿ, ವಿನಯ್ ಶೆಣೈ ಸ್ವಾಗತಿಸಿ, ಗಗನ್ ರಾಜ್ ವಂದಿಸಿದರು. ವಾಣಿಜ್ಯ ವಿಭಾಗದ ಉಪನ್ಯಾಸಕರು ಮಾರ್ಗದರ್ಶನ ಮಾಡಿದರು. ವಿದ್ಯಾರ್ಥಿಗಳು ವಿವಿಧ ಸ್ಟಾಲ್ ಗಳನ್ನು ಸ್ಥಾಪಿಸಿ ವ್ಯವಹಾರ ಮಾಡಿದರು.