
ಹೆಬ್ರಿ : ಹೆಬ್ರಿಯ ಪ್ರತಿಷ್ಠಿತ ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಸಮೂಹ ಶಿಕ್ಷಣ ಸಂಸ್ಥೆಗಳನ್ನು ಮುನ್ನಡೆಸುತ್ತಿರುವ , ಅಮೃತ ಭಾರತಿ ಟ್ರಸ್ಟ್ (ರಿ) ಹೆಬ್ರಿ , ಇದರ ವಿಶ್ವಸ್ಥರಾಗಿರುವ , ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಪದವಿ ಪೂರ್ವ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರಾಗಿ , ಕಾಲೇಜನ್ನು ರಾಜ್ಯದ ಮಾದರಿ ಕಾಲೇಜ್ ಆಗಿ ಮುನ್ನಡೆಸುತ್ತಿರುವ ಶ್ರೀಯುತ ಎಚ್ ರಾಜೇಶ್ ನಾಯಕ್ ಅವರನ್ನು ಪಾಂಡುರಂಗ ರಮಣ ನಾಯಕ್ ಅಮೃತ ಭಾರತಿ ಹಾಸ್ಟೆಲ್ ಸಮಿತಿಯ ಅಧ್ಯಕ್ಷರಾಗಿ ನಿಯುಕ್ತಿಗೊಳಿಸಲಾಯಿತು. ಹಾಗೂ ಹೆಬ್ರಿಯ ಪ್ರಸಿದ್ಧ ಉದ್ಯಮಿಗಳಾದ ಶ್ರೀಯುತ ಲಕ್ಷ್ಮಣ್ ಭಟ್ ಇವರನ್ನು ಅಮೃತ ಭಾರತಿ ಟ್ರಸ್ಟ್ ನ ನೂತನ ವಿಶ್ವಸ್ಥರಾಗಿ ಸೇರ್ಪಡೆಗೊಳಿಸಲಾಗಿದೆ ಎಂದು ಅಮೃತ ಭಾರತಿ ಟ್ರಸ್ಟ್ ನ ಅಧ್ಯಕ್ಷ ಸಿಎ ಎಂ. ರವಿ ರಾವ್ ಅವರು ತಿಳಿಸಿರುತ್ತಾರೆ.