
ಬೆಳಗಾವಿ: ಕೌಜಲಗಿ ಸಮೀಪದ ಬಿಲಕುಂದಿ ಬಳಿ ಗೊಡಚಿನಮಲ್ಕಿ-ಬಾದಾಮಿ ರಾಜ್ಯ ಹೆದ್ದಾರಿಯಲ್ಲಿ ಟಿಪ್ಪರ್ ಮತ್ತು ಕಾರಿನ ಮಧ್ಯೆ ರವಿವಾರ ಸಂಭವಿಸಿದ ಅಪಘಾತದಲ್ಲಿ ಇಬ್ಬರು ಸ್ಥಳದಲ್ಲೇ ಮೃತಪಟ್ಟಿದ್ದಾರೆ.
ಕಲ್ಲೋಳಿಯ ಶಿವಪ್ಪ ಹುಕ್ಕೇರಿ(40), ನಿಂಗಾಪುರದ ಕೆಂಚಪ್ಪ ಕರಿಗಾರ(35) ಮೃತರು.
ಗೋಕಾಕದಿಂದ ಕೌಜಲಗಿ ಕಡೆ ಹೊರಟಿದ್ದ ಕಾರು ಚಾಲಕನ ನಿಯಂತ್ರಣ ತಪ್ಪಿ, ಎದುರಿಗೆ ಬಂದ ಟಿಪ್ಪರ್‌ಗೆ ಡಿಕ್ಕಿ ಹೊಡೆದಿದೆ. ಅದರಲ್ಲಿದ್ದ ಇಬ್ಬರು ಸಾವನ್ನಪ್ಪಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಕುಲಗೋಡ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.