ಬೆಳಗಾವಿ: ಮದ್ದು ತಯಾರಿಸುವ ಸಂದರ್ಭದಲ್ಲಿ ಆಕಸ್ಮಿಕವಾಗಿ ಸ್ಫೋಟಗೊಂಡು ವ್ಯಕ್ತಿಯೊಬ್ಬರು ಸಜೀವ ದಹನವಾದ ಘಟನೆ ಗೋಕಾಕ ತಾಲೂಕು ಪಾಮಲದಿನ್ನಿ ಗ್ರಾಮದಲ್ಲಿ ನಡೆದಿದೆ.

ಮಲ್ಲಪ್ಪ ಸತ್ಯಪ್ಪ ಕಂಕಣವಾಡಿ (38)ಮೃತ ಪಟ್ಟವರು. ಮಲ್ಲಪ್ಪ ಅವರು ಪಂಚಮಿ ಹಬ್ಬದಂದು ಮದ್ದು ತಯಾರಿಸಲು ತಯಾರಿ ನಡೆಸುತ್ತಿದ್ದರು. ಮದ್ದು ತಯಾರಿಸುವ ವೇಳೆ ಆಕಸ್ಮಿಕವಾಗಿ ಈ ದುರ್ಘಟನೆ ಸಂಭವಿಸಿದೆ. ಏಕಾಏಕಿ ಬೆಂಕಿ ಎಲ್ಲಾ ಕಡೆ ಆವರಿಸಿದ್ದರಿಂದ ಮಲ್ಲಪ್ಪ ಸುಟ್ಟು ಭಸ್ಮವಾಗಿದ್ದಾರೆ. ಸ್ಥಳಕ್ಕೆ ಘಟಪ್ರಭಾ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ಮೃತದೇಹವನ್ನು ಪರೀಕ್ಷೆಗೆ ರವಾನಿಸಲಾಗಿದೆ. ಮುಂಜಾಗ್ರತಾ ಕ್ರಮ ಕೈಗೊಳ್ಳದೇ ಇರುವುದು ಈ ದುರ್ಘಟನೆಗೆ ಕಾರಣ ಎನ್ನಲಾಗಿದ್ದು ಘಟಪ್ರಭಾ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.