
ಬೆಳಗಾವಿ : ಬೆಳಗಾವಿಯ ಪ್ರಯತ್ನ ಸಂಘಟನೆಯ ಸದಸ್ಯರು ಸಮೃದ್ದಿ ಫೌಂಡೇಷನ್ ಗೆ ಭೇಟಿ ನೀಡಿ ಅಲ್ಲಿನ ಸುಮಾರು 52 ಮಕ್ಕಳಿಗೆ ನೋಟ್ ಬುಕ್ ಮತ್ತು ಇತರ ಶಾಲಾ ಸಾಹಿತ್ಯಗಳನ್ನು ಮತ್ತು ದಿನಸಿ ಸಾಮಾನುಗಳನ್ನು ದೇಣಿಗೆ ನೀಡಿದರು. ಎಲ್ಲ ಮಕ್ಕಳಿಗೆ ಸ್ನ್ಯಾಕ್ಸ್ ಮತ್ತು ಹಾಲು ವಿತರಿಸಿದರು. ಪ್ರಯತ್ನ ಸಂಘಟನೆಯ ಶಾಂತಾ ಆಚಾರ್ಯ, ವೀಣಾ ದೇಶಪಾಂಡೆ, ಸುನೀತಾ, ವೀಣಾ ಕುಲಕರ್ಣಿ, ಆರತಿ ಭಟ್, ವರದ ಭಟ್ ಉಪಸ್ಥಿತರಿದ್ದರು.