ಬೆಳಗಾವಿ : ಪ್ರಯತ್ನ ಸಂಘಟನೆಯ ಕಾರ್ಯಕರ್ತರು 3/1/2025 ರಂದು ಬೆಳಗಾವಿಯ ಎನ್ ಎಸ್ ಪೈ ಶಾಲೆಗೆ ಭೇಟಿ ನೀಡಿ 13 ಬಡ ವಿದ್ಯಾರ್ಥಿಗಳ ರು. 30000/- ಶಾಲಾ ಶುಲ್ಕವನ್ನು ಭರಿಸಿದರು. ಹಾಗೆಯೆ ಮಾತೃ ಸೇವಾ ಸಂಸ್ಥೆ ಯ ಜೊತೆಗೂಡಿ ಮರುಬಳಕೆ ಮಾಡಲು ಬರುವಂಥ ಇಂಗ್ಲಿಷ್, ಹಿಂದಿ ಕನ್ನಡ ಅಕ್ಷರ ಮಾಲೆ ಪುಸ್ತಕಗಳನ್ನು ಪೆನ್ ಗಳನ್ನೂ ಬಾಲವಾಡಿಯ 30 ವಿದ್ಯಾರ್ಥಿಗಳಿಗೆ ವಿತರಿಸಲಾಯಿತು.ಅದೇ ದಿನ ಶಾಲೆಯಲ್ಲಿ ಸಾವಿತ್ರಿಬಾಯಿ ಫುಲೆ ಜಯಂತಿಯನ್ನು ಆಚರಿಸಲಾಯಿತು. ಮುಖ್ಯ ಶಿಕ್ಷಕಿ ರಾಧಿಕಾ ನಾಯಿಕ್ ಅವರು ಸಾವಿತ್ರಿ ಬಾಯಿ ಫುಲೆಯವರ  ಬಗ್ಗೆ ಮಾತನಾಡಿ, ಆಗಿನ ಕಾಲದಲ್ಲಿ ಹೆಣ್ಣು ಮಕ್ಕಳ ಶಿಕ್ಷಣದಲ್ಲಿ ಆವರ ಮಹತ್ತರವಾದ ಯೋಗದಾನದ ಬಗ್ಗೆ ತಿಳಿಸಿದರು.

ಈ ಸಂದರ್ಭದಲ್ಲಿ ಪ್ರಯತ್ನ ಸಂಘಟನೆಯ ಅಧ್ಯಕ್ಷ ಶಾಂತ ಆಚಾರ್ಯ ಅವರು ಸಂಘಟನೆಯು ನಡೆದು ಬಂದ ದಾರಿಯ ಬಗ್ಗೆ ಮಾತನಾಡಿದರು.ಎಲ್ಲ ಮಕ್ಕಳಿಗೆ ತಿಂಡಿಯನ್ನೂ ಹಂಚಿದರು. ಶಾಲೆಯ ಮುಖ್ಯ ಶಿಕ್ಷಕಿ ರಾಧಿಕಾ ನಾಯಿಕ್, ಶಾಲೆಯ ಶಿಕ್ಷಕ ವೃಂದದವರು ಹಾಗು ಮಾತೃ ಸೇವಾ ಸಂಸ್ಥೆಯ ಸದಸ್ಯರು ಮತ್ತು ಸಂಘಟನೆಯ ಅಧ್ಯಕ್ಷೆ ಶಾಂತ ಆಚಾರ್ಯ , ಸದಸ್ಯೆಯರಾದ ಬೀನಾ, ಶೋಭಾ, ವೀಣಾ, ಶ್ವೇತಾ, ಸುನೀತಾ, ಸುಮಾ, ಪದ್ಮ ಮೊದಲಾದವರು ಉಪಸ್ಥಿತರಿದ್ದರು.