ಬೆಳಗಾವಿ :
ಪ್ರಯತ್ನ ಸಂಘಟನೆಯ ಸದಸ್ಯೆಯರು ಬೆಳಗಾವಿಯ ಚನ್ನಮ್ಮ ನಗರದ ಸರ್ಕಾರಿ ಶಾಲೆಗೆ ಭೇಟಿ ನೀಡಿದರು.

ಶಾಲಾ ಮಕ್ಕಳ ಅವಶ್ಯಕತೆಯಂತೆ ಶಾಲೆಗೆ ಕುಡಿಯುವ ನೀರಿನ ಟ್ಯಾಂಕ್ ಖರೀದಿಸಲು ರೂ. 15000/- ದೇಣಿಗೆ ನೀಡಿದರು. ಸಂಘಟನೆಯ ಅಧ್ಯಕ್ಷೆ ಶಾಂತ ಆಚಾರ್ಯ, ಬೀನಾ, ಶೀಲಾ, ಆರತಿ ಕೆ., ಆರತಿ ಭಟ್, ಲತಾ, ಉಷಾ, ಪದ್ಮಾ, ಶ್ವೇತಾ, ವರದ, ಶುಭಾ ಕೆ, ಶುಭಾ ಹೆಗ್ಡೆ, ಉಪಸ್ಥಿತರಿದ್ದರು. ವಿದ್ಯಾರ್ಥಿಗಳಿಗೆ ಬಿಸ್ಕತ್ ಹಂಚಲಾಯಿತು.