Join The Telegram | Join The WhatsApp |
ನವದೆಹಲಿ:ಹಜರತ್ ನಿಜಾಮುದ್ದೀನ್ ರೈಲ್ವೆ ನಿಲ್ದಾಣದಲ್ಲಿ ಟಿಕೆಟ್ ಕೌಂಟರ್ ನಲ್ಲಿ ರೈಲ್ವೆ ಉದ್ಯೋಗಿಯೊಬ್ಬ ಪ್ರಯಾಣಿಕರಿಗೆ ವಂಚಿಸಿದ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ.
ಶುಕ್ರವಾರ ರೈಲ್ ವಿಸ್ಪರ್ಸ್ ಎಂಬ ಸಾಮಾಜಿಕ ಬಳಕೆದಾರರು ಈ ಕ್ಲಿಪ್ ಅನ್ನು ಟ್ವಿಟ್ಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಮಂಗಳವಾರ ಈ ಘಟನೆ ನಡೆದಿದೆ ಎಂದು ಟ್ವಿಟ್ಟರ್ ಪೋಸ್ಟ್‌ನ ಕ್ಯಾಪ್ಷನ್ ಹೇಳುತ್ತದೆ.
ವಿಡಿಯೋದಲ್ಲಿ ಪ್ರಯಾಣಿಕನ ಬಳಿ 500 ರೂ. ನೋಟನ್ನು ಸ್ವೀಕರಿಸಿದ ರೈಲ್ವೆ ಉದ್ಯೋಗಿ ಅದನ್ನು ತನ್ನ ಜೇಬಿಗೆ ಇಟ್ಟುಕೊಂಡು ಬದಲಿಗೆ 20 ರೂ. ನೋಟು ಕೈಯಲ್ಲಿ ಇಟ್ಟುಕೊಂಡು ₹ 125 ದರದ ಟಿಕೆಟ್ ನೀಡಲು ಹೆಚ್ಚಿನ ಹಣಕ್ಕಾಗಿ ಬೇಡಿಕೆಯಿಟ್ಟು ಪ್ರಯಾಣಿಕನಿಗೆ ಮೋಸ ಮಾಡಲು ಪ್ರಯತ್ನಿಸುತ್ತಿರುವುದನ್ನು ಕಾಣಬಹುದು. ಸೂಪರ್‌ಫಾಸ್ಟ್ ಗ್ವಾಲಿಯರ್ ರೈಲಿನಲ್ಲಿ ಪ್ರಯಾಣಿಸಲು ರೈಲ್ವೆ ಪ್ರಯಾಣಿಕರು ಈ ವಿಡಿಯೋ ಕ್ಲಿಪ್‌ನಲ್ಲಿ ಟಿಕೆಟ್ ಕೇಳಿದ್ದಾರೆ. 500 ರೂ. ನೋಟು ಸಹ ನೀಡಿದ್ದಾರೆ. ಆದರೆ, ರೈಲ್ವೆ ಉದ್ಯೋಗಿಯು ಆ ರೈಲಿನ ಹೆಸರನ್ನು ಮತ್ತೆ ಖಚಿತಪಡಿಸಿಕೊಳ್ಳುವ (confirm) ನೆಪದಲ್ಲಿ 500 ರೂ. ನೋಟನ್ನು ತನ್ನ ಜೇಬಿನಲ್ಲಿ ಇಟ್ಟುಕೊಂಡು 20 ರೂ. ಮುಖಬೆಲೆಯ ನೋಟನ್ನು ತನ್ನ ಕೈಯಲ್ಲಿ ಇಟ್ಟುಕೊಂಡಿದ್ದಾರೆ. ಅಲ್ಲದೆ, 125 ರೂ. ಟಿಕೆಟ್ ನೀಡಲು ಅವರು ಹೆಚ್ಚಿನ ಹಣವನ್ನು ಸಹ ಕೇಳುತ್ತಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ. ಇದು ರೈಲ್ವೆ ಸೇವಾ ಮತ್ತು ದೆಹಲಿ ವಿಭಾಗ, ಉತ್ತರ ರೈಲ್ವೆ (DRM ದೆಹಲಿ NR) ಯ ಗಮನ ಸೆಳೆದಿದೆ. ಈ ಪೋಸ್ಟ್‌ಗೆ ಪ್ರತಿಕ್ರಿಯೆ ನೀಡಿದ ಸಂಬಂಧಿತ ರೈಲ್ವೆ ಅಧಿಕಾರಿಗಳು, ನೌಕರನನ್ನು ವಿಚಾರಣೆ ನಡೆಸಲಾಗುತ್ತಿದೆ ಮತ್ತು ಅವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ. ಈ ಕುರಿತು ವರದಿಯಾಗಿದೆ.
Join The Telegram | Join The WhatsApp |