This is the title of the web page
This is the title of the web page

Live Stream

June 2023
S M T W T F S
 123
45678910
11121314151617
18192021222324
252627282930  

| Latest Version 9.4.1 |

international News

ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಈಗ ಟೆಕ್ಸಾಸ್ ನಲ್ಲಿ ನ್ಯಾಯಾಧೀಶ !

Join The Telegram Join The WhatsApp

ನ್ಯಾಯಾಧೀಶರಾಗಿ ಪ್ರಮಾಣ ವಚನ ಸ್ವೀಕರಿಸಿದ ನಂತರ ಪತ್ರಕರ್ತರೊಂದಿಗೆ ಮಾತನಾಡಿದ ಸುರೇಂದ್ರನ್ ಅವರು, ನಾನು ದಿನಗೂಲಿಗಾಗಿ ಬೀಡಿ ಕಟ್ಟುವಾಗಲೇ ಉತ್ತಮ ಭವಿಷ್ಯ ಕಟ್ಟಿಕೊಳ್ಳುವ ಶಪಥ ಮಾಡಿದ್ದೆ. ಕಷ್ಟಪಟ್ಟು ಓದಿದೆ. ಭಾರತದಲ್ಲಿ ಕಾನೂನು ವೃತ್ತಿ ಆರಂಭಿಸಿದ್ದು ಅಮೆರಿಕದಲ್ಲೂ ನೆರವಿಗೆ ಬಂತು. ಅವಿರತ ಶ್ರಮದಿಂದ ಇಂತಹ ಹುದ್ದೆ ತಲುಪಿದ್ದೇನೆ. ನಮಗೆ ನಾವೇ ಶಿಲ್ಪಿಯಾಗಿ ಬದುಕಬೇಕು ಎಂದು ಹೇಳಿದರು.

 

 

ಕಾಸರಗೋಡು/ಟೆಕ್ಸಾಸ್:

ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ಭಾರತೀಯ ಮೂಲದ ವ್ಯಕ್ತಿ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ. ಅಮೆರಿಕದ ಟೆಕ್ಸಾಸ್ ನಲ್ಲಿ ನೆಲೆಸಿರುವ ಭಾರತೀಯ ಮೂಲದ ವಕೀಲ ಸುರೇಂದ್ರನ್ ಪಟ್ಟೆಲ್ ಫೋರ್ಟ್‌ ಬೆಂಡ್ ಕೌಂಟಿ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ.

ಮನಸ್ಸಿದ್ದರೆ ಮಾರ್ಗ , ಸಾಧಿಸುವ ಛಲವೊಂದಿದ್ದರೆ ಯಾವುದೂ ಅಸಾಧ್ಯವಲ್ಲ ಎಂಬುದು ಮತ್ತೊಮ್ಮೆ ಸಾಬೀತಾಗಿದೆ.

ಒಂದು ಸಮಯದಲ್ಲಿ ಕೇರಳದಲ್ಲಿ ಶಾಲೆಯನ್ನು ಅರ್ಧಕ್ಕೆ ಬಿಟ್ಟು , ಬೀಡಿ ಕಟ್ಟುತ್ತಿದ್ದ ಬಾಲಕನೊಬ್ಬ ಇದೀಗ ಅಮೆರಿಕದ ಟೆಕ್ಸಾಸ್‌ನ ಜಿಲ್ಲಾ ನ್ಯಾಯಾಧೀಶರಾಗಿದ್ದು , ಈ ಸಾಧನೆಯು ಎಲ್ಲರೂ ಬಾಯಿ ಮೇಲೆ ಬೆರಳಿಡುವಂತೆ ಮಾಡಿದೆ. ಅಮೆರಿಕದ ಟೆಕ್ಸಾಸ್‌ನಲ್ಲಿ ಭಾರತೀಯ ಮೂಲದ ವಕೀಲ ಸುರೇಂದ್ರನ್ ಕೆ ಪಟ್ಟೆಲ್ ನ್ಯಾಯಾಧೀಶರಾಗಿದ್ದಾರೆ. ಜನವರಿ 1 ರಂದು ಟೆಕ್ಸಾಸ್‌ನ ಫೋರ್ಟ್ ಬೆಂಡ್ ಕೌಂಟಿಯಲ್ಲಿರುವ ನ್ಯಾಯಾಲಯದ ನ್ಯಾಯಾಧೀಶರಾಗಿ ನೇಮಕಗೊಂಡಿದ್ದಾರೆ. ಕಾಸರಗೋಡಿನಲ್ಲಿ ದಿನಗೂಲಿ ನೌಕರರ ದಂಪತಿಗೆ ಜನಿಸಿದ್ದರು . ಶಾಲಾ , ಕಾಲೇಜು ದಿನಗಳಲ್ಲಿ ಪೋಷಕರಿಗೆ ಹೊರೆಯಾಗಬಾರದು ಎಂಬ ಕಾರಣಕ್ಕೆ ತಾನೂ ಕೆಲಸ ಮಾಡುತ್ತಿದ್ದರು . ಬೀಡಿ ಕಟ್ಟಿ ಜೀವನ ನಡೆಸುತ್ತಿದ್ದ ವ್ಯಕ್ತಿ ಇದೀಗ ನ್ಯಾಯಾಧೀಶರಾಗಿರುವುದು ಹೆಮ್ಮೆಯ ವಿಚಾರ.

ಅವರು 10 ನೇ ತರಗತಿ ಬಳಿಕ ಶಿಕ್ಷಣಕ್ಕೆ ತೆರೆ ಎಳೆದು ಬೀಡಿ ಕಟ್ಟಲು ಆರಂಭಿಸಿದ್ದರು . ಆದರೆ ಆ ಕಠಿಣ ಸಂದರ್ಭವು ಅವರ ದೃಷ್ಟಿಕೋನವನ್ನು ಸಂಪೂರ್ಣವಾಗಿ ಬದಲಾಯಿಸಿತ್ತು . ಒಂದು ವರ್ಷದ ಬಳಿಕ ಮತ್ತೆ ಓದುವ ಬಯಕೆ ವ್ಯಕ್ತಪಡಿಸಿದ್ದರು. ಬಳಿಕ ಹಂತ ಹಂತವಾಗಿ ಬೆಳೆಯುತ್ತಾ ಇದೀಗ ಅಮೆರಿಕದಲ್ಲಿ ನ್ಯಾಯಾಧೀಶರಾಗಿದ್ದಾರೆ . ಸುರೇಂದ್ರನ್ ಅವರು , ನಾಯನಾರ್ ಸ್ಮಾರಕ ಸರ್ಕಾರಿ ಕಾಲೇಜಿಗೆ ಸೇರಿದರೂ ಕೆಲಸವನ್ನು ಮುಂದುವರಿಸಬೇಕಾಯಿತು. ಇದರಿಂದ ಹಾಜರಾತಿಗೆ ತೊಂದರೆಯಾಗಿ ಅವರನ್ನು ಪರೀಕ್ಷೆಗೆ ಕೂರಲು ಬಿಡಲಿಲ್ಲವಂತೆ , ಆದರೆ ಪಟ್ಟೆಲ್ ಅವರು ವಕೀಲರಾಗಲು ಬಯಸಿದ್ದು , ತನಗೆ ಒಂದೇ ಒಂದು ಅವಕಾಶ ನೀಡುವಂತೆ ಬೇಡಿಕೊಂಡಿದ್ದರು.

1995 ರಲ್ಲಿ ಕಾನೂನು ಪದವಿ ಪಡೆದು , 1996 ರಲ್ಲಿ ಕೇರಳದ ಹೊಸದುರ್ಗದಲ್ಲಿ ಪ್ರಾಕ್ಟಿಸ್ ಮಾಡಲು ಶುರುಮಾಡಿದ್ದರು. ಕ್ರಮೇಣವಾಗಿ ಪ್ರಸಿದ್ಧ ವಕೀಲರಾದರು . ಸುಮಾರು 1 ದಶಕದ ನಂತರ ಅವರು ಸುಪ್ರೀಂಕೋರ್ಟ್‌ನಲ್ಲಿ ಪ್ರಾಕ್ಟಿಸ್ ಆರಂಭಿಸಿದ್ದರು. 2007 ರಲ್ಲಿ ಅವರ ಕುಟುಂಬಕ್ಕೆ ಅಮೆರಿಕಕ್ಕೆ ಹೋಗುವ ಅವಕಾಶ ಸಿಕ್ಕಿತ್ತು , ಬಳಿಕ ನರ್ಸ್ ಆಗಿದ್ದ ಅವರ ಪತ್ನಿಯನ್ನು ಅಮೆರಿಕದ ಪ್ರಮುಖ ವೈದ್ಯಕೀಯ ಸೌಲಭ್ಯವೊಂದರಲ್ಲಿ ಕೆಲಸ ಮಾಡಲು ಅವಕಾಶ ನೀಡಲಾಗಿತ್ತು. ಅವರು ತಮ್ಮ ಮಗಳೊಂದಿಗೆ ಅಲ್ಲಿ ನೆಲೆಸಿದರು, ಅಮೆರಿಕಕ್ಕೆ ತೆರಳಿದ ಎರಡು ವರ್ಷಗಳ ನಂತರ , ಪಟ್ಟೆಲ್ ಟೆಕ್ಸಾಸ್ ಬಾರ್ ಪರೀಕ್ಷೆಗೆ ಹಾಜರಾದರು. ಅವರು ತಮ್ಮ ಮೊದಲ ಪ್ರಯತ್ನದಲ್ಲಿ ಪಾಸ್ ಕೂಡ ಆದರು. ನಾನು ಉತ್ತಮ ಸ್ಕೋರ್ ಮಾಡದಿದ್ದರೆ ಓದುವುದನ್ನೇ ನಿಲ್ಲಿಸುತ್ತೇನೆ ಎಂದು ಹೇಳಿದ್ದ ಅವರು , ಟಾಪರ್ ಆಗಿ ಹೊರಹೊಮ್ಮಿದ್ದರು.

ಹೌಸ್ ಕೀಪಿಂಗ್ ಕೆಲಸ ಮಾಡುತ್ತಾ ಓದನ್ನು ಮುಂದುವರೆಸಿದ್ದರು . ನಂತರ ಟೆಕ್ಸಾಫ್ ನ್ಯಾಯಾಲಯದಲ್ಲಿ ಕೆಲಸಕ್ಕೆ ಸೇರಿದರು. ಜನವರಿ ಒಂದರಂದು ಟೆಕ್ಸಾಸ್ ಕೌಂಟಿ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿದ್ದಾರೆ.


Join The Telegram Join The WhatsApp
Admin
the authorAdmin

Leave a Reply