Join The Telegram | Join The WhatsApp |
ಪ್ರಯಾಗರಾಜ್ :
ರೈಲಿನಲ್ಲಿ ಪ್ರಯಾಣಿಸುತ್ತಿದ್ದಾಗ ಬೋಗಿಯ ಕಿಟಕಿಗೆ ಕಬ್ಬಿಣದ ರಾಡ್ ಬಡಿದು ಪ್ರಯಾಣಿಕನ ಕುತ್ತಿಗೆಗೆ ಚುಚ್ಚಿ ಸಾವಿಗೀಡಾದ ಘಟನೆ ನಡೆದಿದೆ.
ಹರಿಕೇಶ್ ಕುಮಾರ್ ದುಬೆ ಎಂಬ ವ್ಯಕ್ತಿಗೆ ರಾಡ್ ಚುಚ್ಚಿದ್ದು ತನ್ನ ಸೀಟಿನ ಮೇಲೆ ರಕ್ತದ ಮಡುವಿನಲ್ಲಿ ಅವರು ಕುಳಿತಿರುವ ಫೋಟೊವನ್ನು ಪ್ರಕಟಿಸಲಾಗಿದೆ. ದೆಹಲಿಯಿಂದ ಕಾನ್ಪುರಕ್ಕೆ ಹೋಗುತ್ತಿದ್ದ ನೀಲಾನಾಚಲ ಎಕ್ಸ್‌ಪ್ರೆಸ್ ರೈಲಿನಲ್ಲಿ ಉತ್ತರ ಮಧ್ಯ ರೈಲ್ವೆಯ ಪ್ರಯಾಗ್‌ರಾಜ್ ವಿಭಾಗದ ದನ್ವಾರ್ ಮತ್ತು ಸೋಮ್ನಾ ನಡುವೆ ಬೆಳಿಗ್ಗೆ 8:45 ಕ್ಕೆ ಈ ಘಟನೆ ನಡೆದಿದೆ ಎಂದು ವರದಿಯಾಗಿದೆ.
ದುಬೆ ಕಿಟಕಿಯ ಸೀಟಿನಲ್ಲಿ ಕುಳಿತಿದ್ದರು. ಇದ್ದಕ್ಕಿದ್ದಂತೆ ಕಬ್ಬಿಣದ ರಾಡ್ ಗಾಜು ತೂರಿ ಅವನ ಕುತ್ತಿಗೆಗೆ ಬಡಿಯಿತು ಎಂದು ವರದಿಯಲ್ಲಿ ಹೇಳಲಾಗಿದೆ.
ಜನರಲ್ ಕೋಚ್‌ನಲ್ಲಿದ್ದ ರಿಷಿಕೇಶ್ ಕಬ್ಬಿಣದ ರಾಡ್’ನಿಂದ ಸಾವನ್ನಪ್ಪಿದ್ದಾರೆ ಎಂದು ರೈಲ್ವೆ ವಕ್ತಾರರು ತಿಳಿಸಿದ್ದಾರೆ. ಬಳಿಕ ಅಲಿಗಢ ಜಂಕ್ಷನ್‌ನಲ್ಲಿ ರೈಲನ್ನು ನಿಲ್ಲಿಸಿ ಮೃತದೇಹವನ್ನು ರೈಲ್ವೆ ಪೊಲೀಸರಿಗೆ ಹಸ್ತಾಂತರಿಸಲಾಗಿದೆ ಎಂದು ವರದಿಯಾಗಿದೆ.
Join The Telegram | Join The WhatsApp |