ಮಣ್ಣಗುಡ್ಡೆ : ಶ್ರೀ ನವದುರ್ಗಾ ಮಹಾಗಣಪತಿ ದೇವಸ್ಥಾನದಲ್ಲಿ ಜೂ. 25 ರಂದು ಅಂಗಾರಕ ಸಂಕಷ್ಟಿ ಪೂಜೆ ನಡೆಯಲಿದೆ. ಮಧ್ಯಾಹ್ನ 12.30 ಕ್ಕೆಗಣಪತಿ ಹೋಮ, ಸಂಜೆ 6.30 ಕ್ಕೆಜಿಲ್ಲಾ ಮಟ್ಟದಲ್ಲಿ ಹಾಗೂ ರಾಜ್ಯ ಮಟ್ಟದಲ್ಲಿ ಪ್ರಶಸ್ತಿ ಪಡೆದ ಯುವ ಭಜನಾ ತಂಡ ಕುಳಾಯಿ ಅವರಿಂದ ಕುಣಿತ ಭಜನೆ, ರಾತ್ರಿ 8:15 ಕ್ಕೆ ರಂಗ ಪೂಜೆ, ದೀಪರಾಧನೆ,ಅಂಗಾರಕ ಸಂಕಷ್ಟಿ ಪೂಜೆ ನಡೆಯಲಿದೆ ಎಂದು ಆಡಳಿತ ಮೊಕ್ತೇಸರ ಜಿ.ವಿಶ್ವನಾಥ ಭಟ್ ತಿಳಿಸಿದ್ದಾರೆ.