ಬೆಳಗಾವಿ: ಬಿಜೆಪಿ ರಾಜ್ಯ ಉಪಾಧ್ಯಕ್ಷ ಮತ್ತು ಮಾಜಿ ಶಾಸಕ ಅನಿಲ ಬೆನಕೆ ಮರಾಠಾ ಲೈಟ್ ಇಂಫಟ್ರಿ ಕರ್ನಲ್ ಆರ.ಕೆ.ರಾವತ ಹಾಗೂ ಕೆ.ಎಸ್.ಆರ್.ಟಿ.ಸಿ. ಬೆಳಗಾವಿ ವಿಭಾಗೀಯ ನಿಯಂತ್ರಣಾಧಿಕಾರಿ ರಾಜೇಶ ಹುದ್ದಾರ, ಬೆಳಗಾವಿ ನಗರ ದೇವಸ್ಥಾನ ಮಂಡಳ ಪದಾಧಿಕಾರಿಗಳ ಉಪಸ್ಥಿತಿಯಲ್ಲಿ ಬೆಳಗಾವಿ ಕೇಂದ್ರ ಬಸ್ ನಿಲ್ದಾಣದಲ್ಲಿ ನೌಗೋಬಾ (ರೇಣುಕಾ ದೇವಿ) ಯಾತ್ರೆಯ ಸ್ಥಳದ ಪರಿಶೀಲನೆ ನಡೆಸಿ ಸಭೆಯಲ್ಲಿ ಸೌಂದರ್ಯಿಕರಣ ಹಾಗೂ ಮೂಲಭೂತ ಸೌಕರ್ಯಗಳ ಬಗ್ಗೆ ಚರ್ಚಿಸಲಾಯಿತು.
ಕ್ಯಾಂಟೋನ್ಮೆಂಟ್ ಬೆಳಗಾವಿ, ಎಮ್.ಎಲ್.ಐ.ಆರ್ .ಸಿ. ಬ್ರಿಗೇಡಿಯರ್ ಜೋಯದೀಪ ಮುಖರ್ಜಿ ಹಾಗೂ ರಾಜ್ಯ ಸಾರಿಗೆ ಸಂಸ್ಥೆ ಅವರ ಸಹಕಾರದೊಂದಿಗೆ ಶೀಘ್ರದಲ್ಲಿ ಕಾಮಗಾರಿ ಕೈಗೆತ್ತಿಕೊಳ್ಳಲಾಗುವುದು.
ಈ ಸಂದರ್ಭದಲ್ಲಿ ನಗರ ದೇವಸ್ತಾನ ಮಂಡಳ ಅಧ್ಯಕ್ಷ ರಣಜಿತ ಚವ್ಹಾಣ ಪಾಟೀಲ, ಕಾರ್ಯದರ್ಶಿ ಪರಶರಾಮ ಮಾಳಿ, ಹಾಗೂ ವಿಜಯ ತಂಬುಚೆ, ಕೆ.ಎಸ್.ಆರ್.ಟಿ.ಸಿ. ಬೆಳಗಾವಿ ಎಇಇ ನಾರಾಯಣ ತಿಮ್ಮರಗುದ್ದಿ, ಎಇ ದಿನೇಶ ಸರ್ಷಾಟ, ಇಇ ಎಸ್.ವಿ. ಅಂಗಡಿ, ಡಿ.ಟಿ.ಒ. ಕೆ.ಕೆ.ಲಮಾಣಿ ಉಪಸ್ಥಿತರಿದ್ದರು.